ಚಿತ್ರದುರ್ಗ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಕೆರೆಗಳು ತುಂಬಿದ್ರೇ, ನದಿಗಳು ಉಕ್ಕಿ ಹರಿಯುತ್ತಿವೆ. ಹಿರಿಯೂರು ತಾಲೂಕಿನ ( Hiriyur Taluk ) ಪ್ರಸಿದ್ಧ ವಾಣಿ ವಿಲಾಸ ಸಾಗರ ಜಲಾಶಯ ( Vani Vilasa Sagara Dam ) ಭರ್ತಿಯಾಗಿದ್ದು ಕೋಡಿ ಬಿದ್ದಿದೆ. ಈ ಬೆನ್ನಲ್ಲೇ ಈಶ್ವರಗೆರೆ ಕೆರೆ ( Eshwaragere Lake ) ಕೂಡ ಇಂದು ಐದು ವರ್ಷದ ಬಳಿಕ ಕೋಡಿ ಬಿದ್ದಿದೆ.
ಹಿರಿಯೂರು ತಾಲೂಕಿನ ಈಶ್ವರಗೆರೆ ಗ್ರಾಮದಲ್ಲಿರುವಂತ ( Eshwaragere Village ) ಕೆರೆ, ಕಳೆದ ಮಧ್ಯರಾತ್ರಿ ಭಾರೀ ಮಳೆಯಿಂದಾಗಿ ಭರ್ತಿಯಾದ ಪರಿಣಾಮ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದ ನೀರು ರಸ್ತೆಯ ಮೂಲಕ ಹೊರ ಹೋಗುತ್ತಿರೋದನ್ನು ನೋಡೋದಕ್ಕೆ ಸುತ್ತ ಮುತ್ತಲ ಗ್ರಾಮದ ಅನೇಕ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
BIG NEWS: ಬೆಂಗಳೂರಿನಲ್ಲಿ ‘ಬೆಸ್ಕಾಂ ನಿರ್ಲಕ್ಷ್ಯ’ದಿಂದ ಯುವತಿ ಮೃತಪಟ್ಟಿಲ್ಲ – BESCOM ಸ್ಪಷ್ಟನೆ
ಇನ್ನೂ ಹಿರಿಯೂರಿನಿಂದ ಆಂಧ್ರಪ್ರದೇಶಕ್ಕೆ ಧರ್ಮಪುರ ಮಾರ್ಗವಾಗಿ ಸಾಗಲು ಇರೋ ರಸ್ತೆಯಲ್ಲಿಯೇ ಈಶ್ವರಗೆರೆ ಕೆರೆಯ ಕೋಡಿ ಬಿದ್ದ ನೀರು ಹರಿಯುತ್ತಿರೋ ಕಾರಣ, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇದಲ್ಲದೇ ಕೋಡಿ ಬಿದ್ದ ಈಶ್ವರಗೆರೆ ಕೆರೆಯನ್ನು ನೋಡೋದಕ್ಕೆ ಜನರು ಆಗಮಿಸಿ, ನೀರಿನಲ್ಲಿ ಓಡಾಡೋದು, ಮಿಂದು ಸಂತಸಗೊಳ್ಳುತ್ತಿದ್ದಾರೆ.
ರಸ್ತೆಯಲ್ಲಿಯೇ ಕೆರೆಯ ಕೋಡಿ ನೀರು ಹರಿಯುವ ಕಾರಣ, ಸುರಕ್ಷತೆಯ ದೃಷ್ಠಿಯಿಂದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ವಾಹನ ಸವಾರರಿಗೆ, ಜನರಿಗೆ ಸುರಕ್ಷಿತವಾಗಿ ಓಡಾಡುವಂತೆ, ತೆರಳುವಂತೆ ಲೌಡ್ ಸ್ಪೀಕರ್ ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ.
ಅಬ್ಬಿನಹೊಳೆ ಠಾಣಾ ವ್ಯಾಪ್ತಿಯಲ್ಲಿ ಹರಿಯುವ ವೇದವತಿ ನದಿ ದಂಡೆಯಲ್ಲಿನ ಗ್ರಾಮಗಳಲ್ಲಿ PSI & Staff ರವರು ಸಾರ್ವಜನಿಕರಿಗೆ ನದಿ ಉಕ್ಕಿಹರಿಯುವುದರಿಂದ ಆಗುವ ಪರಿಣಾಮಗಳ ಕುರಿತು ಮೆಗಾ ಪೋನ್ ಮೂಲಕ ಜಾಗೃತಿ ಯನ್ನು ಮೂಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka @igperdvg pic.twitter.com/SiK2dL94yz
— Chitradurga District Police (@DistrictPolice1) September 6, 2022
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಹಿರಿಯೂರು ತಾಲೂಕು ಆಡಳಿತದಿಂದ ಮಳೆಯ ಪ್ರವಾಹದಿಂದ ನೆರೆ ಸಂತ್ರಸ್ತರ ತುರ್ತು ನೆರವಿಗಾಗಿ ನೋಡಲ್ ಅಧಿಕಾರಿಗಳನ್ನಾಗಿ ಭಾರತಿ ಲಕ್ಷ್ಮೀನಾರಾಯಣ ಅವರನ್ನು ನೇಮಿಸಲಾಗಿದೆ. ಅಲ್ಲದೇ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಭಾರೀ ಮಳೆಯಿಂದ ನೆರೆ ಸಂತ್ರಸ್ತರಾದಂತವರು ಸಹಾಯವಾಣಿ ಸಂಖ್ಯೆ 9901821195ಗೆ ಕರೆ ಮಾಡುವಂತೆ ಕೋರಲಾಗಿದೆ.
ವರದಿ : ವಸಂತ ಬಿ ಈಶ್ವರಗೆರೆ
BREAKING : ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್: 5ನೇ ಆರೋಪಿ ಗಂಗಾಧರಯ್ಯ ಪೊಲೀಸರಿಗೆ ಶರಣು