ಚಿತ್ರದುರ್ಗ : ನಿಮ್ಮ ಮನಿ ಲ್ಯಾಂಡರಿಂಗ್ ಆಗಿದೆ ಎಂದು ವ್ಯಕ್ತಿಯಿಂದ ಸೈಬರ್ ವಂಚಕರು ಸುಮಾರು 1.27 ಕೋಟಿ ಹಣವನ್ನು ತೆಗೆದುಕೊಂಡು ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಹೌದು ಚಿತ್ರದುರ್ಗದಲ್ಲಿ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರಿಂದ 1.27 ಕೋಟಿ ವಂಚನೆ ಮಾಡಿರುವ ಘಟನೆ ನಡೆದಿದೆ. TRAI & ಮುಂಬೈ ಪೊಲೀಸ್ ಎಂದು ಕರೆ ಮಾಡಿದ್ದ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡ್ ರಿಂಗ್ ವಂಚನೆ ಆಗಿದೆ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ವಂಚಕರು ನಂಬಿಸಿದ್ದರು.
ಈ ವೇಳೆ ಸೈಬರ್ ವಂಚಕರು ವ್ಯಕ್ತಿಯಿಂದ ತಮ್ಮ ಖಾತೆಗೆ 1.27 ಕೋಟಿ ಹಣ ವರ್ಗಾಯಿಸಿಕೊಂಡು ವಂಚಕರು ಮೋಸ ಎಸಗಿದ್ದಾರೆ ವಾಟ್ಸಪ್ ನಾರ್ಮಲ್ ಕಾಲ್ ಮಾಡಿ ವಂಚಕರು ನಂಬಿಸಿದ್ದರು. ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.