ಚೀನಾ: ಪೋಷಕ ದಂಪತಿಗಳು ತಮ್ಮ ಮಗನಿಗೆ ರಾತ್ರಿಯಿಡೀ ಟಿವಿ ನೋಡುವ ಶಿಕ್ಷೆ ಕೊಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ.
ಪೋಷಕರು ತಮ್ಮ ಮಕ್ಕಳಿಗೆ ಶಿಸ್ತು ಮತ್ತು ಪ್ರಮುಖ ಜೀವನ ಮೌಲ್ಯಗಳನ್ನು ವಿವಿಧ ರೀತಿಯಲ್ಲಿ ಕಲಿಸುತ್ತಾರೆ. ಆದ್ರೆ, ಇಲ್ಲೊಂದು ಚೀನಾದ ದಂಪತಿಗಳು ತಮ್ಮ ಮಗುವಿಗೆ ಪಾಠ ಕಲಿಸಲು ಅತಿರೇಕಕ್ಕೆ ಹೋದರು. ಹೆಚ್ಚು ಕಾಲ ಟಿವಿ ನೋಡಿದ್ದಕ್ಕಾಗಿ ತಮ್ಮ ಎಂಟು ವರ್ಷದ ಮಗನಿಗೆ ರಾತ್ರಿಯಿಡೀ ಟಿವಿ ನೋಡುವಂತೆ ಬಲವಂತದ ಶಿಕ್ಷೆ ನೀಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ವೆದಿಯ ಪ್ರಕಾರ, ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಎಂಟು ವರ್ಷದ ಹುಡುಗನನ್ನು ಅವನ ಪೋಷಕರು ಹೊರಗೆ ಹೋಗುವಾಗ ಮನೆಯಲ್ಲಿಯೇ ಬಿಟ್ಟು, ಮನೆಕೆಲಸ ಮುಗಿಸಿ ರಾತ್ರಿ 8.30 ಕ್ಕೆ ಮಲಗಲು ಹೇಳಿ ಹೋಗಿದ್ದಾರೆ. ಆದ್ರೆ, ಬಾಲಕ ಮನೆ ಕೆಲಸ ಮಾಡದೇ ಟಿವಿ ನೋಡುವುದನ್ನೇ ಮುಂದುವರೆಸಿದ್ದ. ಪೋಷಕರು ಮನೆಗೆ ಬಂದು ನೋಡೊದರೆ, ಮನೆ ಕೆಲಸ ಮಾಡದೇ ಮಗ ಟಿವಿ ನೋಡುತ್ತಿದ್ದರಿಂದ ಕೋಪಗೊಂಡರು.
ಹೀಗಾಗಿ, ಮಗನನ್ನು ಮಲಗಲು ಬಿಡದೇ, ಟಿವಿ ಆನ್ ಮಾಡಿ ರಾತ್ರಿಯಿಡೀ ನೋಡುವಂತೆ ಒತ್ತಾಯಿಸಿದ್ದಾರೆ. ದಂಪತಿಗಳು ಮಗುವಿನ ಮೇಲೆ ನಿಗಾ ಇಡಲು ಸರದಿಯಂತೆ ರಾತ್ರಿಯಿಡೀ ಕಾಯುತ್ತಾ ಕುಳಿತರು. ಬಾಲಕನಿಗೆ ನಿದ್ರೆ ಮಾಡಬೇಕು ಎಂದು ರೋಧಿಸಿದರೂ, ಅವನನ್ನು ಬಿಡದೇ ಮುಂಜಾನೆ 5 ಗಂಟೆಯವರೆಗೆ ಮಲಗಲು ಅವಕಾಶ ನೀಡಲಿಲ್ಲ ಎಂದು ವರದಿ ತಿಳಿಸಿದೆ.
ಚೀನಾದ ಸಾಮಾಜಿಕ ಮಾಧ್ಯಮ ವೆಬ್ಸೈಟ್ಗಳಲ್ಲಿ ವೈರಲ್ ಆಗಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿಯು ಹುಡುಗನು ಮಂಚದ ಮೇಲೆ ನಿದ್ರಿಸುತ್ತಿರುವುದನ್ನು ತೋರಿಸುತ್ತದೆ. ಅವನ ತಾಯಿ ಅಥವಾ ತಂದೆಯಿಂದ ಎಚ್ಚರಗೊಂಡು ಹೆಚ್ಚು ಟಿವಿ ನೋಡುವಂತೆ ಒತ್ತಾಯಿಸುವುದನ್ನು ನೋಡಬಹುದಾಗಿದೆ.
ಏತನ್ಮಧ್ಯೆ, ಈ ಘಟನೆಯು ಪೋಷಕರ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಶಿಕ್ಷೆಯನ್ನು “ತುಂಬಾ ಕಠಿಣ” ಎಂದು ಕರೆದಿದ್ದಾರೆ.
BIG NEWS: 95ನೇ ಆವೃತ್ತಿಯ ʻಮನ್ ಕಿ ಬಾತ್ʼ: ಇಂದು ಬೆಳಿಗ್ಗೆ 11 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ