ಬೆಂಗಳೂರು : ಇತ್ತೀಚೆಗೆ ಬೆಂಗಳೂರು ನಗರದ ಮಹದೇವಪುರ ಕ್ಷೇತ್ರದ ಪಣತ್ತೂರು ಬಳಗೆರೆ ರಸ್ತೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ತುಂಬಾ ನೀರು ಹರಿಯುತ್ತಿತ್ತು. ಶಾಲಾ ಬಸ್ ಒಂದು ರಸ್ತೆ ಕಾಣದೆ ಪಕ್ಕದಲ್ಲಿ ಜಾರಿತ್ತು ಇದೇ ಘಟನೆ ಸಂಬಂಧಿಸಿದಂತೆ ಇದೀಗ ಶಾಲಾ ಮಕ್ಕಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೋ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಶಾಲಾ ಮಕ್ಕಳು ಮನವಿ ಮಾಡಿಕೊಂಡಿದ್ದು, ಪತ್ರ ಬರೆದು ರಸ್ತೆ ಗುಂಡಿ ಸಮಸ್ಯೆಯನ್ನು ಮಕ್ಕಳು ವಿವರಿಸಿದ್ದಾರೆ. ಮೋದಿ ತಾತ ಸಿದ್ದರಾಮಯ್ಯ ತಾತ ನಮ್ಮ ರೋಡ್ ಹೀಗೆ ಯಾಕಿದೆ? ಎಲ್ಲಿ ನೋಡಿದರೂ ಗುಂಡಿ, ಕಲ್ಲು, ಮಣ್ಣು ತುಂಬಿದೆ ಅಪ್ಪ ಟ್ಯಾಕ್ಸ್ ಕಟ್ಟುತ್ತಾರೆ ಅಮ್ಮನು ಟ್ಯಾಕ್ಸ್ ಕಟ್ಟುತ್ತಾರೆ . ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಪತ್ರದ ಮೂಲಕ ವಿವರಣೆ ಮಾಡಿದ್ದಾರೆ. ಸ್ಕೂಲ್ ಬಸ್ ಒಳಗೆ ಕೂತು ಮಕ್ಕಳು ವಿಡಿಯೋ ಮಾಡಿದ್ದಾರೆ.