ಚಿಕ್ಕಮಗಳೂರು: ಬಾಳೆಹಣ್ಣಿನಲ್ಲಿ ಔಷದ ಹಾಕಿ ಸುಮಾರು 30 ಮಂಗಗಳನ್ನು ದಾರುಣವಾಗಿ ಸಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ದ್ಯಾವಣ ಎಂಬ ಅರಣ್ಯ ವಲಯ ಪ್ರದೇಶದಲ್ಲಿ ನಡೆದಿದೆ.
ಹೌದು ದ್ಯಾವಣ ಗ್ರಾಮದ ಬಳಿ 30 ಮಂಗಗಳ ಮಾರಣಹೋಮ ನಡೆದಿದ್ದು, ಬಾಳೆಹಣ್ಣಿಗೆ ಔಷಧಿ ಹಾಕಿ 30 ಮಂಗಗಳನ್ನು ಕಿಡಿಗೇಡಿಗಳು ಕೊಂದಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ದ್ಯಾವನ ಬಳಿ ಈ ದುರ್ಘಟನೆ ಸಂಭವಿಸಿದೆ.
16 ಗಂಡು 14 ಹೆಣ್ಣು 4 ಮರಿ ಕೋತಿಗಳ ಮಾರಣ ಹೋಮ ನಡೆದಿದೆ. 30 ಕೋತಿಗಳನ್ನು ಕೊಂದು ಪಾಪಿಗಳು ರಸ್ತೆಗೆ ತಂದು ಎಸೆದು ಹೋಗಿದ್ದಾರೆ. ಜ್ಞಾನ ತಪ್ಪಿದ ಬಳಿಕ ತಲೆಗೆ ಹೊಡೆದುಕೊಂದಿದ್ದಾರೆ. 30 ಮಂಗಳ ತಲೆಯಲ್ಲಿ ಒಂದೇ ರೀತಿಯ ಗಾಯ ರಕ್ತ ಸುರಿದು ಸಾವನ್ನಪ್ಪಿವೆ. ಸ್ಥಳಕ್ಕೆ ಡಿಎಫ್ಓ, ಆರ್ಎಫ್ಓ, ಪಿಎಸ್ಐ ಪಶು ಸಂಗೋಪನೆ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ನಾಳೆ ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಚರ್ಚಿಸಲು ‘CWC ಸಭೆ’ ಕರೆದ ಮಲ್ಲಿಕಾರ್ಜುನ ಖರ್ಗೆ