ಬೆಂಗಳೂರು: ಬಿಗ್ ಬಾಸ್ ಕನ್ನಡ ಸ್ಪರ್ಧೆಯಲ್ಲಿ ಪಾಲ್ಗೊಂಡು, ಅಲ್ಲಿಯೇ ಪರಿಚಯವಾಗಿದ್ದಂತ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ, ದಾಂಪತ್ಯಕ್ಕೆ ಕಾಲಿಟ್ಟಿತ್ತು. ಇದೀಗ ಕೆಲವೇ ವರ್ಷಗಳಲ್ಲೇ ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿ ವಿಚ್ಥೇದನಕ್ಕೆ ಇಬ್ಬರು ಸೆಲೆಬ್ರೆಟಿಗಳು ಅರ್ಜಿ ಸಲ್ಲಿಸಿರೋದಾಗಿ ತಿಳಿದು ಬಂದಿದೆ.
Rap ಸಾಂಗ್ ಹಾಡುಗಾರ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ದಾಂಪತ್ಯ ಈಗ ಡಿವೋರ್ಸ್ ಹಂತಕ್ಕೆ ತಲುಪಿದೆ. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅಂದಹಾಗೇ ಕನ್ನಡದ ಬಿಗ್ ಬಾಸ್ ಸೀಸನ್-5ರಲ್ಲಿ ಕನ್ನಡ ರ್ಯಾಪ್ ಹಾಡುಗಳ ಮೂಲಕ ಮನೆ ಮಾತಾಗಿದ್ದಂತ ಚಂದನ್ ಶೆಟ್ಟಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಬಿಗ್ ಬಾಸ್ ನಲ್ಲಿ ನಿವೇದಿತಾ ಕೂಡ ಪಾಲ್ಗೊಂಡಿದ್ದರು. ಇವರಿಬ್ಬರು ಆ ಸ್ಪರ್ಧೆಯಲ್ಲೇ ಪ್ರೀತಿಸೋದಕ್ಕೆ ಶುರು ಮಾಡಿದ್ದರು. ಬಿಗ್ ಬಾಸ್ ನಂತ್ರ ಮೈಸೂರಿನ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಚಂದನ್ ಶೆಟ್ಟಿ, ನಿವೇದಿತಾಗೆ ಪ್ರಪೋಸ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಈ ಬಳಿಕ ಚಂದನ್ ಶೆಟ್ಟಿ-ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಈ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಈಗ ಕೆಲವೇ ಕೆಲವು ವರ್ಷಗಳಲ್ಲೇ ದಾಂಪತ್ಯದಲ್ಲಿ ಬಿರುಕು ಕಂಡು, ವಿಚ್ಚೇದನಕ್ಕಾಗಿ ಇಬ್ಬರು ಸೆಲೆಬ್ರೆಟಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಚಾಕೋಲೇಟ್ ಆಸೆ ತೋರಿಸಿ ಬಾಲಕಿ ಕತ್ತುಕೊಯ್ದು ಹತ್ಯೆಗೆ ಯತ್ನ