ಚಿಕ್ಕಮಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಕನ್ನಡ ಶಾಲಾ-ಕಾಲೇಜುಗಳು ( School and College ) ಅಳಿವಿನಂಚನ್ನು ತಲುಪಿವೆ. ಈ ಶಾಲೆಗಳನ್ನು ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಉಳಿಸಿ ಬೆಳೆಸೋ ಕೆಲಸದಂತ ಪ್ರತಿಜ್ಞೆಯನ್ನು ಮಾಡೋಣ ಎಂಬುದಾಗಿ ಡಾ.ಕೆ.ಎಲ್ ಚಂದ್ರಶೇಖರ್ ( Lecture Dr K L Chandrashekhar ) ಕರೆ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಚಿಕ್ಕಮಗಳೂರಿನ ಕನ್ನಡ ಉಪನ್ಯಾಸಕ ಡಾ.ಕೆ.ಎಲ್.ಚಂದ್ರಶೇಖರ್ (Kannada Lecturer Dr KL Chandrashekhar ), ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಇಂದು ಅಳಿವಿನ ಅಂಚಿನಲ್ಲಿದೆ. ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ನಾವು ಇಂದು ಮಾಡಬೇಕಿದೆ. ದುರಂತವೆಂದರೆ ಕನ್ನಡ ಭಾಷೆಯನ್ನು ( Kannada Language ) ಉಳಿಸಿ ಬೆಳೆಸಬೇಕಾಗಿರುವ ಕನ್ನಡ ಶಾಲಾ ಕಾಲೇಜುಗಳು ಅಳಿವಿನ ಅಂಚಿನಲ್ಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
BREAKING : 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: CIDಯಿಂದ ಮತ್ತೆ 6 ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ
ಮಕ್ಕಳಿಗೆ ಬೋಧಿಸುವ ಶಿಕ್ಷಕ, ಉಪನ್ಯಾಸಕರ ಜೀವನ ಸಾಗಿಸಲು ಸಾಧ್ಯವಾಗದೆ, ಕೂಲಿ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುವ ಪರಿಸ್ಥಿತಿಗೆ ಬಂದಿದ್ದಾರೆ. ಎಷ್ಟೋ ಕನ್ನಡ ಶಾಲಾ ಕಾಲೇಜುಗಳು, ಮುಚ್ಚಲ್ಪಟ್ಟಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡ ನಾಡಿನಲ್ಲಿ ಕನ್ನಡವು ಮರೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಆತಂಕ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರೌಢ ಶಾಲೆಗಳನ್ನು ಉನ್ನತೀಕರಣ: 29 ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭ
ನಮ್ಮ ಶಿಕ್ಷಕರು ಹಸಿವಿನಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತೆ ಆಗಿದೆ. 1995ರ ನಂತರದ ಶಾಲಾ ಕಾಲೇಜುಗಳಿಗೆ ವೇತನ ಅನುದಾನವನ್ನು ನೀಡಿ ಶಿಕ್ಷಕರ ಹಸಿವನ್ನು ನೀಗಿಸಿ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅವರ ಬಾಳಿಗೆ ಬೆಳಕಾಗಬೇಕಾಗಿ ಎಂಬುದಾಗಿ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ಸಾರ್ವಜನಿಕರೇ ಗಮನಿಸಿ : ನಾಳೆ ಕೆ.ಆರ್.ವೃತ್ತದಿಂದ ತಿಮ್ಮಯ್ಯ ಜಂಕ್ಷನ್ ವರೆಗೆ ವಾಹನ ಸಂಚಾರ ನಿಷೇಧ