ಚಿಕ್ಕಮಗಳೂರು : ಕ್ಷುಲ್ಲಕ ಕಾರಣಕ್ಕೆ ಇಬ್ಬರು ವಕೀಲರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಘಟನೆಯ ಕುರಿತಂತೆ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೊಲೆರೋ ವಾಹನದಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.ಈ ವೇಳೆ ಕಾರಿನಲ್ಲಿ ವೇಗವಾಗಿ ಅಡ್ಡ ಬಂದು ಬೊಲೆರೋ ಚಾಲಕನಿಗೆ ವಕೀಲ ಪ್ರಶ್ನೆ ಮಾಡಿದ್ದಾರೆ. ರೋಗಿಯನ್ನು ಬೊಲೆರೋ ವಾಹನ ಚಾಲಕ ಆಸ್ಪತ್ರೆಗೆ ಸಾಗಿಸುತ್ತಿದ್ದ. ಆಸ್ಪತ್ರೆಯ ಮುಂದೆ ರೋಗಿಯನ್ನು ನೋಡಿ ಬೋಲೇರೊ ಚಾಲಕರನ್ನು ಪ್ರಶ್ನೆ ಮಾಡಿದ್ದಕ್ಕೆ ವಕೀಲ ಕ್ಷಮೆ ಕೇಳಿದ್ದಾರೆ.
ವಕೀಲರು ಕ್ಷಮೆ ಕೇಳಿದರೂ ಸಹ ಯುವಕರ ಗುಂಪೊಂದು ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ವಕೀಲರಾದಂತಹ ಪೃಥ್ವಿ ಮತ್ತು ಮಂಜುನಾಥ್ ಎನ್ನುವ ಇಬ್ಬರು ವಕೀಲರ ಮೇಲೆ ನಾಲ್ವರು ಯುವಕರು ಹಲ್ಲೆ ಮಾಡಿದ್ದಾರೆ. ಸದ್ಯ ಇಬ್ಬರು ವಕೀಲರ ಮೇಲೆ ಯುವಕರು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಯನ್ನು ಖಂಡಿಸಿ ಬಸವನಹಳ್ಳಿ ಠಾಣೆಯ ಮುಂದೆ ಇದೀಗ ವಕೀಲರು ಜಮಾಾವಣೆ ಆಗಿದ್ದಾರೆ. ವಕೀಲರ ಮೇಲೆ ಹಲ್ಲೆಗೆ ಚಿಕ್ಕಮಂಗಳೂರು ಬಾರ್ ಕೌನ್ಸಿಲ್ ಆಕ್ರೋಶವನ್ನು ಹೊರ ಹಾಕಿದೆ. ಘಟನೆಗೆ ಸಂಬಂಧಿಸಿದಂತೆ ನಿಖಿಲ್, ಪ್ರದೀಪ್ ಸೇರಿದಂತೆ ನಾಲ್ವರ ವಿರುದ್ಧ ಚಿಕ್ಕಮಂಗಳೂರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.