ಚಿಕ್ಕಬಳ್ಳಾಪುರ : ಪ್ರೀಯತಮೆಯ ಕಿರುಕುಳಕ್ಕೆ ಬೇಸತ್ತು ವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಬಾಪೂಜಿನಗರದಲ್ಲಿ ಬಾಲಾಜಿ ಸಿಂಗ್ (30) ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಮಂಡೆ ಪಟ್ಟಣದಲ್ಲಿರುವ ಬಾಪೂಜಿನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಪ್ರಿಯತಮೆ ಕಿರುಕುಳಕ್ಕೆ ನೊಂದ ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದು ಪತ್ನಿ ಮತ್ತು ಮಕ್ಕಳಿದ್ದರೂ ಯುವತಿಯೊಂದಿಗೆ ಅಕ್ರಮ ಸಂಬಂಧ ಆರೋಪ ಕೇಳಿ ಬಂದಿದೆ. ಈ ವೇಳೆ ಬುದ್ಧಿವಾದ ಹೇಳಿ ಮಹಿಳೆಯಿಂದ ಸಂಬಂಧಿಕರು ದೂರ ಇರಿಸಿದ್ದರು. ಆದರೂ ಬಾಲಾಜಿಯಿಂದ ಮಹಿಳೆ ದೂರ ಇರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಪತ್ನಿಯ ಮನೆಯಲ್ಲಿ ಬಾಲಾಜಿ ಸಿಂಗ್ ನೇಣು ಬಿಗಿದುಕೊಂಡು ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಭಂದ ಗುಡಿಬಂಡೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.








