ಚಿಕ್ಕಬಳ್ಳಾಪುರ : ಅವರಿಬ್ಬರೂ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿ ಬೇರೊಬ್ಬನ ಜೊತೆ ಮದುವೆ ಆಗಿದ್ದನ್ನು ನೋಡಿ, ಆಕೆಯ ಪ್ರಿಯಕರ ಯುವತಿಯ ಗಂಡನಿಂದ ಡೈವೋರ್ಸ್ ಕೊಡಿಸಿ ಪ್ರಿಯತಮನೊಂದಿಗೆ ಸಂಸಾರ ಮಾಡಿದ್ದಾಳೆ. ಆದರೆ ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಇದೀಗ ಪ್ರಿಯತಮ ಕೈಕೊಟ್ಟು ಪರಾರಿಯಾಗಿದ್ದಾನೆ.
ಹೌದು ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಹಮತ್ತುಲ್ಲ ಎನ್ನುವ ಯುವಕ, ಬಾಗೇಪಲ್ಲಿ ತಾಲೂಕಿನ ಚೆಂಡೂರು ಗ್ರಾಮದ ಯುವತಿಗೆ ಗಾಳ ಹಾಕಿ ಕಳೆದ ಹತ್ತು ವರ್ಷಗಳಿಂದ ಪ್ರೀತಿ-ಪ್ರೇಮ, ಪ್ರಣಯ, ಲಿವಿಂಗ್ ವಿತ್ ರಿಲೇಶನ್ ಎಂದು ಮಾಡಿದ್ದಾನೆ. ಕೊನೆಗೆ ಮದುವೆಗೆ ನಿರಾಕರಿಸಿದ ಕಾರಣ ಯುವತಿ ಬೇರೆ ಮದುವೆ ಮಾಡಿಕೊಂಡಿದ್ದಳು.
ಆದರೂ ಆಕೆಯನ್ನು ಬಿಡದೆ ಕೊನೆಗೆ ಹಾಗೊ ಹೀಗೋ ಮಾಡಿ ಆಕೆಗೆ ಆಕೆಯ ಗಂಡನ ಜೊತೆ ಡೈವೊರ್ಸ್ ಕೊಡಿಸಿದ್ದಾನೆ. ನಂತರ ಕಳೆದ 5 ವರ್ಷಗಳಿಂದ ಆಕೆಯ ಜೊತೆ ಸಂಸಾರ ಮಾಡಿದ್ದಾನೆ. ಆದ್ರೆ, ಈಗ ಹುಟ್ಟಿದ ಮಗು ಹೆಣ್ಣೆಂಬ ಕಾರಣ ನಂಬಿ ಬಂದವಳನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ.ನೊಂದ ವಿವಾಹಿತೆ ದಿಕ್ಕು ತೊಚದೆ ಪೆರೇಸಂದ್ರ ಪೊಲೀಸರ ಮೊರೆ ಹೋಗಿದ್ದು, ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.