ಚಿಕ್ಕಬಳ್ಳಾಪುರ : ಅನೈತಿಕ ಸಂಬಂಧದ ಹಿನ್ನೆಲೆ ಇಬ್ಬರ ನಡುವೆ ಜಗಳ ನಡೆದು ಮಹಿಳೆ ದಾರುಣವಾಗಿ ಕೊಲೆಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.
ಅನೈತಿಕ ಸಂಬಂಧದ ಹಿನ್ನೆಲೆ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಇಬ್ಬರು ದಾರಿಯಲ್ಲಿ ಜಗಳ ಮಾಡುತ್ತಾ ಬರುತ್ತಿರುತ್ತಾರೆ, ಈ ವೇಳೆ ಜಗಳ ವಾಗ್ವಾದಕ್ಕೆ ತಿರುಗಿ ವ್ಯಕ್ತಿ ಮುನಿಕೃಷ್ಣ ಎಂಬಾತ ಮಹಿಳೆಯನ್ನು ಲಾರಿ ಕೆಳಗೆ ತಳ್ಳಿದ್ದಾನೆ, ಪರಿಣಾಮ ಚಕ್ರಕ್ಕೆ ಸಿಲುಕಿದ ಮಹಿಳೆ ದೇಹ ಎರಡು ಭಾಗವಾಗಿದೆ. ಭೀಕರ ಘಟನೆಯನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ.
ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮುನಿಕೃಷ್ಣ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮಹಿಳಾ ‘PSI’ ನಿಂದ ಕಿರುಕುಳ ಆರೋಪ : ಡೆತ್ ನೋಟ್ ಬರೆದಿಟ್ಟು ಯುವಕ ನಾಪತ್ತೆ
BREAKING NEWS: ಕಂಟೇನರ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ: ನೆಲಮಂಗಲ ಬಳಿ ರಾ.ಹೆ.48ರಲ್ಲಿ ಟ್ರಾಫಿಕ್ ಜಾಮ್