ತಮಿಳುನಾಡು; ತಮಿಳುನಾಡಿನ ರಾಜಧಾನಿ ಚೆನ್ನೈನ ಜನಪ್ರಿಯ ತಿನಿಸುವೊಂದರಲ್ಲಿ ತಾನು ಆರ್ಡರ್ ಮಾಡಿದ ಆಹಾರದಲ್ಲಿ ಹುಳುಗಳು ಕಂಡುಬಂದಿವೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ಇಲ್ಲಿನ ಅಶೋಕ್ ನಗರದಲ್ಲಿ ವಾಸಿಸುತ್ತಿರುವ ಮಹಿಳೆ ಸೋಮವಾರ ತನ್ನ ಮಗನೊಂದಿಗೆ ಮಾಲ್ನೊಳಗೆ ‘ನಮ್ಮ ವಿದ್ಯಾ ವಸಂತ ಭವನ’ ಎಂಬ ಹೆಸರಿನ ರೆಸ್ಟೋರೆಂಟ್ಗೆ ಹೋದರು. ಈ ವೇಳೆ ಅವರ ಮಗನ ಕೋರಿಕೆಯಂತೆ ಚೋಲಾ ಪುರಿ ಆರ್ಡರ್ ಮಾಡಿದರು. ತಾನು ಮಾಡಿದ ಆರ್ಡರ್ ಬಂದಿದ್ದು, ಅದನ್ನು ತಿನ್ನಲು ಮುಂದಾದಾಗ ಆಹಾರದಲ್ಲಿ ಹುಳು ಹರಿದಾಡುತ್ತಿರುವುದನ್ನು ಗಮನಿಸಿ ಆಕೆ ಕಿರುಚಾಡಿದ್ದಾಳೆ. ಈ ವೇಳೆ ಅಲ್ಲಿಗೆ ಧಾವಿಸಿದ ಅಕ್ಕಪಕ್ಕದ ಗ್ರಾಹಕರು ಆಹಾರದಲ್ಲಿದ್ದ ಹುಳುಗಳನ್ನು ಕಂಡು ಅಸಹ್ಯಗೊಂಡಿದ್ದಾರೆ.
ಈ ಬಗ್ಗೆ ಮಹಿಳೆ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದು, ಅಧಿಕಾರಿಗಳು ರೆಸ್ಟೋರೆಂಟ್ ಮತ್ತು ಅಡುಗೆಮನೆಯ ಕಾರ್ಯಾಚರಣೆಯ ಮೇಲೆ ತಾತ್ಕಾಲಿಕ ನಿಷೇಧವನ್ನು ವಿಧಿಸಿದ್ದಾರೆ ಮತ್ತು ಆಹಾರ ಸುರಕ್ಷತಾ ಕಾಯ್ದೆಗೆ ಅನುಗುಣವಾಗಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ ವರದಿಯಾಗಿದೆ.
ವಸಂತ ಭವನ ರೆಸ್ಟೊರೆಂಟ್ ಚೆನ್ನೈನ ಕೊಯಾಂಬೆಡು ಪ್ರದೇಶದಲ್ಲಿನ ಒಂದು ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಆಗಿದೆ.
ಕೇಂದ್ರ ಸಚಿವೆ ʻಸ್ಮೃತಿ ಇರಾನಿʼಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗೋವಾ ಶಾಸಕ…?
ಹಾಸ್ಟೆಲ್ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
Big news: ರಾಷ್ಟ್ರೀಯ ಭದ್ರತಾ ಸಲಹೆಗಾರ ʻಅಜಿತ್ ದೋವಲ್ʼ ನಿವಾಸದ ಭದ್ರತಾ ಲೋಪ: ಮೂವರು CISF ಕಮಾಂಡೋಗಳು ವಜಾ