ನವದೆಹಲಿ: ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2022 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ( Nobel Prize in Chemistry 2022 ) ಕರೋಲಿನ್ ಆರ್. ಬೆರ್ಟೋಜ್ಜಿ, ಮೊರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್ಲೆಸ್ ಅವರಿಗೆ “ಕ್ಲಿಕ್ ಕೆಮಿಸ್ಟ್ರಿ ಮತ್ತು ಬಯೋಆರ್ಥೋಗೋನಲ್ ಕೆಮಿಸ್ಟ್ರಿಯ ಅಭಿವೃದ್ಧಿಗಾಗಿ” ನೀಡಿತು.
BREAKING NEWS:
The Royal Swedish Academy of Sciences has decided to award the 2022 #NobelPrize in Chemistry to Carolyn R. Bertozzi, Morten Meldal and K. Barry Sharpless “for the development of click chemistry and bioorthogonal chemistry.” pic.twitter.com/5tu6aOedy4— The Nobel Prize (@NobelPrize) October 5, 2022
ರಸಾಯನಶಾಸ್ತ್ರ ನೊಬೆಲ್ ಇತಿಹಾಸ
1901 ಮತ್ತು 2020 ರ ನಡುವೆ 186 ನೊಬೆಲ್ ಪ್ರಶಸ್ತಿ ವಿಜೇತರಿಗೆ 112 ಬಾರಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. 1958 ಮತ್ತು 1980ರಲ್ಲಿ ಎರಡು ಬಾರಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಪಡೆದ ಏಕೈಕ ಪ್ರಶಸ್ತಿ ವಿಜೇತ ಫ್ರೆಡ್ರಿಕ್ ಸ್ಯಾಂಗರ್.
2021 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಬೆಂಜಮಿನ್ ಲಿಸ್ಟ್ ಮತ್ತು ಡೇವಿಡ್ ಡಬ್ಲ್ಯೂ.ಸಿ. ಮ್ಯಾಕ್ಮಿಲನ್ ಅವರಿಗೆ “ಅಸಮ್ಮಿತೀಯ ಆರ್ಗನೊಕ್ಯಾಟಲಿಸಿಸ್ ಅಭಿವೃದ್ಧಿಗಾಗಿ” ನೀಡಲಾಯಿತು.