ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವಂತ ( Chamarajpete ) ಈದ್ಗಾ ಮೈದಾನದ ( Edga Maidan ) ಮಾಲೀಕತ್ವ ವಿವಾದ ಸಂಬಂಧ, ಇಂದು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ( Karnataka High Court ), ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಇಂದು ಹೈಕೋರ್ಟ್ ನ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ಧಂತ ವಿಭಾಗಿಯ ಪೀಠವು, ಚಾಮರಾಜಪೇಟೆಯ ಈದ್ಗಾ ಮೈದಾನ ಮಾಲೀಕತ್ವ ವಿವಾದ ಕುರಿತಂತೆ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿತು.
ಈದ್ಗಾ ಮೈದಾನದ ಜಾಗವನ್ನು ಆಟದ ಮೈದಾನವಾಗಿ ಮಾತ್ರ ಬಳಸಿಕೊಳ್ಳೋದಕ್ಕೆ ಆದೇಶಿಸಿತು. ಇದಲ್ಲದೇ ರಂಜಾನ್, ಬಕ್ರೀದ್ ವೇಳೆಯಲ್ಲಿ ಮಾತ್ರ ಪ್ರಾರ್ಥನೆಗೂ ಬಳಸಿಕೊಳ್ಳೋದಕ್ಕೆ ಅನುಮತಿ ನೀಡಿದೆ. ಜೊತೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆಯೂ ತಿಳಿಸಿದೆ. ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.