ಚಾಮರಾಜಪೇಟೆ: ನಗರದ ಈದ್ಗಾ ಮೈದಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಇಷ್ಟು ದಿನ ಮುಸ್ಲಿಂ ಸಮುದಾಯ ಈದ್ಗಾ ಮೈದಾನ ನಮ್ಮದು ಎಂದು ಹೇಳುತ್ತಿದ್ದರೆ, ಬಿಬಿಎಂಪಿ ಅದು ಆಟದ ಮೈದಾನ ಬಿಬಿಎಂಪಿಗೆ ಸೇರಿದ್ದು ಅಂತ ಹೇಳಿದೆ ಕೊನೆಗೂ ಎಲ್ಲಾ ವಾದ-ವಿವಾದ ಮುಗಿದು ಸರ್ಕಾರದ ಸುಪರ್ದಿಗೆ ಈದ್ಗಾ ಮೈದಾನ ಸಿಕ್ಕಿದೆ. ಸ್ವಾತಂತ್ರ್ಯ ದಿನದಂದು ಸರ್ಕಾರದಿಂದ ಇಲ್ಲಿ ಧ್ವಜಾರೋಹಣ ಕೂ ಮಾಡಲಾಗಿತ್ತು. ಆದರೆ ಇದೀಗ ಗಣೇಶ ಹಬ್ಬದ ಕುರಿತು ಜಟಾಪಟಿ ಶುರುವಾಗಿದೆ. ಸ್ವಲ್ಪ ದಿನ ತಣ್ಣಾಗಿದ್ದ ವಿವಾದ ಮತ್ತೆ ಭುಗಿಲೆದ್ದಿದೆ.
BIGG NEWS: ರಾಜ್ಯದಲ್ಲಿ ಇಂದು ಸಹ ಮಳೆಯ ಅಬ್ಬರ ಜೋರು; ಮಲೆನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ| Rain alert
ಈ ಎಲ್ಲ ವಿವಾದಕ್ಕೆ ಇಂದು ಹೈಕೋರ್ಟ್ನಲ್ಲಿ ಅಂತ್ಯಗೊಳ್ಳಲಿದೆ. ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ನಿಲ್ಲುತ್ತಿಲ್ಲ. ಈಗ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿಚಾರವಾಗಿ ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್ ಬೋರ್ಡ್, ಹೈಕೋರ್ಟ್ ಮೆಟ್ಟಿಲೇರಿದೆ. ಪಾಲಿಕೆ ಜಂಟಿ ಆಯುಕ್ತರು ಮಾಡಿದ ಆದೇಶವನ್ನು ಪ್ರಶ್ನಿಸಿದೆ.
BIGG NEWS: ರಾಜ್ಯದಲ್ಲಿ ಇಂದು ಸಹ ಮಳೆಯ ಅಬ್ಬರ ಜೋರು; ಮಲೆನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ| Rain alert
ಹೈಕೋರ್ಟ್ ಮೆಟ್ಟಿಲೇರಿರುವ ವಕ್ಫ್ ಬೋರ್ಡ್, ಜಂಟಿ ಆಯುಕ್ತರಿಗೆ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಈವರೆಗೂ ಈದ್ಗಾ ಮೈದಾನ ನಮ್ಮ ಅನುಬೋಗದಲ್ಲಿ ಇತ್ತು. ಜಂಟಿ ಆಯುಕ್ತರ ಆದೇಶ ರದ್ದು ಮಾಡುವಂತೆ ಅರ್ಜಿಯಲ್ಲಿ ಕೇಳಲಾಗಿದೆ. ಈ ಸಂಬಂಧ ಇಂದು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.