*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲಾ ಕೇಂದ್ರದ ಉಪ್ಪಾರ ಬೀದಿಯಲ್ಲಿ ಗಣಪತಿ ಬಿಡುತ್ತಿದ್ದಾಗ ಡಿಜೆ ಅಳವಡಿಸಿಕೊಂಡು ಡ್ಯಾನ್ಸ್ ಮಾಡುವ ವಿಚಾರದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ನಿಲ್ಲಿಸುವಂತೆ ಹೇಳಿದಾಗ ಪೋಲೀಸರ ಮೇಲೆ ಕಲ್ಲು ತೂರಾಟ ನಡೆದು ವಾರ (200 ಗಂಟೆ) ಕಳೆದರೂ ಕೂಡ ಪ್ರಮುಖ ಆರೋಪಿಯನ್ನು ಹಿಡಿಯುವಲ್ಲಿ ಪಟ್ಟಣ ಪೋಲೀಸರು ವಿಫಲರಾಗಿದ್ದಾರೆ.
ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಬ್ಇನ್ಸ್ಪೆಕ್ಟರ್ ಮಹದೇವ್ ಮೇಲೆ ಕಲ್ಲು ತಲೆಗೆ ಬಿದ್ದದ್ದರಿಂದ ಗಂಬೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಾರವಾದರೂ ಕೂಡ ಪ್ರಮುಖ ಆರೋಪಿಯನ್ನು ಹಿಡಿಯುವಲ್ಲಿ ಪೋಲೀಸ್ ಇಲಾಖೆ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ ಅಲ್ಲದೆ ಆರೋಪಿ ರಾಜಕೀಯ ಬೆಂಬಲಿತ ವ್ಯಕ್ತಿಯಾಗಿರುವುದರಿಂದ ಈತನನ್ನು ಹಿಡಿಯುವ ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಅಲ್ಲದೆ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಕಲ್ಲೇಟು ಬಿದ್ದು ಸಂದರ್ಭ ಪೋಲಿಸರು ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಎತ್ತಿ ತೋರಿಸಿದರು. ಆದರೆ ಇಂದು ಅದೇ ಪೋಲೀಸ್ ಇಲಾಖೆಯ ಜವಾಬ್ದಾರಿಯುತವಾದ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆಯಾದರೆ ಇದಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಹಿಡಿಯುವಲ್ಲಿ ಜಿಲ್ಲಾ ಮಟ್ಟದ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೀನಾಮೇಷ ಎಣಿಸುತ್ತಿದ್ದಾರೆಯೇ ಎಂಬ ಚರ್ಚೆ ಗ್ರಾಸವಾಗಿದೆ.
ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಆದರೆ ಪೋಲೀಸರಿಗೆ ಕಲ್ಲು ಹೊಡೀತಾರೆ ಎಂದರೆ ಪೋಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಲ್ಲು ಹೊಡೆದು ಅವನನ್ನು ಹಿಡಿಯುವುದನ್ನು ಬಿಟ್ಟು ಸುಮ್ಮನೆ ಕೈಕಟ್ಟಿ ಕುಳಿತಿರುವುದು ಸೋಜಿಗ ಮೂಡಿಸಿದೆ.
ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಮುಖ ವ್ಯಕ್ತಿಯನ್ನು ಇನ್ನೂ ಹಿಡಿದಿಲ್ಲ ಆದರೆ ಏನೂ ತಪ್ಪು ಮಾಡದ ಅಮಾಯಕರನ್ನು ಹಿಡಿದು ಹೊಡೆದು ಬುದ್ಧಿ ಕಲಿಸುವ ಪೋಲೀಸರಿಗೆ ಇಂತಹ ತಮ್ಮದೇ ಇಲಾಖೆಯ ಜವಾಬ್ದಾರಿಯುತವಾದ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲು ಮೀನಾಮೇಷ ಯಾಕೆ ಎಣಿಸುತ್ತಿದ್ದಾರೆ. ಮೇಲಾದಿಕಾರಿಗಳು ಆರೋಪಿಯನ್ನ ಹಿಡಿಯಲು ಅವಕಾಶ ಕೊಡದೆ ರಾಜಕಾರಣಿಗಳಿಗೆ ಮಣಿದು ಆರೋಪಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆಯೇ ಚಾಮರಾಜನಗರ ಹಿರಿಯ ಪೋಲೀಸ್ ಅದಿಕಾರಿಗಳು ಎಂಬ ಅನುಮಾನ ಮೂಡಿಸುತ್ತಿದೆ.
. ಗಣಪತಿ ಕೂರಿಸಲು ಅನುಮತಿಯೆ ಇಲ್ಲ: ಗಣಪತಿ ಕೂರಿಸಲು ಜಿಲ್ಲಾದಿಕಾರಿ ಏಕಗವಾಕ್ಷಿ ಕೇಂದ್ರ ತೆರೆದಿದ್ದರೂ ಇಲ್ಲಿ ಪ್ರತಿಷ್ಟಾಪಿಸಲಾದ ಗಣಪತಿಗೆ ಯಾವುದೆ ಅನುಮತಿ ಪಢಯಲೆ ಇಲ್ಲ..ಜೊತೆಗೆ ವಿಸರ್ಜಿಸುವಾಗ ಡಿಜೆ ಹಾಕಲು ಪೊಲೀಸರು ಹಾಗೂ ನಗರಸಬೆಯಿಂದಲೂ ಅನುಮತಿ ಪಡೆದಿರಲಿಲ್ಲ ಎಂಬ ಸತ್ಯ ಹೊರಬರುತ್ತಿದೆ.ಆಗಿದ್ದರೆ ಅನುಮತಿ ರಹಿತ ಗಣಪನ ಕೂರಿಸೋದು ಪತ್ತೆ ಮಾಡಲು ಪಟ್ಟಣ ಠಾಣಾ ಪೊಲೀಸರು ಸಂಪೂರ್ಣ ವಿಫಲರಾಗಿ ಕರ್ತವ್ಯ ಲೋಪ ತೋರಿರುವುದು ಮೇಲ್ನೋಟಕ್ಕೆ ಸಾಬೀತಾದಂತಾಗಿದೆ.
ಎಎಸ್ಐ ಆಕ್ರೋಶ: ಗಣಪನ ಗಲಾಟೆಯಲ್ಲಿ ಕಲ್ಲೇಟು ತಿಂದ ಆರೋಪಿಯನ್ನ ಬಂದಿಸುವಲ್ಲಿ ವಿಫಲರಾದ ತಮ್ಮ ಇಲಾಖೆ ಅಸಹಾಯಕತೆಯನ್ನ ಆಸ್ಪತ್ರೆಯಲ್ಲಿ ದಾಖಲಾದ ಸಿಬ್ಬಂದಿ ಸ್ಟೇಟಸ್ ಮೂಲಕ ತಮ್ಮ ನೋವನ್ನ ಹೊರಹಾಕಿದ್ದಾರೆ. ಆರೋಪಿಯನ್ನ ಬಂದಿಸುವಲ್ಲಿ ಎರಡು-ಮೂರು ದಿನವಾದರೂ ನಿಷ್ಕ್ರಿಯ ಆದ ಹಿನ್ನಲೆಯಲ್ಲಿ ತಮ್ಮ ನೋವನ್ನ ಈ ರೀತಿ ಹೊರಹಾಕಿದ್ದಾರೆ.” ಪೊಲೀಸ್ ಅವರಿಗೆ ಯಾರು ಗಲಾಟೆ ಮಾಡಿ ಕಲ್ಲು ಹೊಡಿತಾರೆ ಅವರಿಗೆ ಸಪೊರ್ಟ್ ಮಾಡಿ ಅವರಿಗೆ ಬೆಂಬಲ ಮಾಡುತ್ತಾರೆ ಅವರು ನಿಜವಾಗಲೂ ಅಪ್ಪನಿಗೆ ಹುಟ್ಟಿಲ್ಲ..ಯಾರೆ ಆಗಲಿ ನಾವು ಒಂದೆ ಜಾತಿ.ಅದು ಪೊಲೀಸ್ ಅಷ್ಟೆ. ಈ ದಿನ ನನಗಾಗಬಹುದು. ಆಮೇಲೆ ನಿಮಗಾಗಬಹುದು.ದಯವಿಟ್ಟು ಕ್ರಿಮಿನಲ್ ಗೂಂಡಾಗಳಿಗೆ ದಯವಿಟ್ಟು ಸಪೊರ್ಟ್ ಮಾಡಬೇಡಿ. ಅದರಲ್ಲಿ ನಮ್ ಜಾತಿ ಆಗಲಿ, ನಮ್ ಅಣ್ಣಾ ಆಗಲಿ ಹಾಗೂ ಅವರಿಂದ ಎಷ್ಟೆ ಹೆಲ್ಪ್ ಮಾಡಿದ್ರುಕೂಡ ಪೊಲಿಸರಿಗೆ ಅಟ್ಯಾಕ್ ಮಾಡಿದರೆ ಪ್ಲಿಸ್ ಅವರಿಗೆ ಸಪೊರ್ಟ್ ಮಾಡಬೇಡಿ.ಈ ದಿನ ನಾನು ನೆಕ್ಸ್ಟ್ ನೀವು.ನಮಿಂದ ತಪ್ಪಾಗಿದ್ರೆ ಯಾರೂ ಸುಮ್ಮನಿರೊಲ್ಲ.ಪ್ಲಿಸ್ ಕ್ರಿಮಿನಲ್ ಗೂಂಡಗಳಿಗೆ ದಯವಿಟ್ಟು ಸಪೊರ್ಟ್ ಮಾಡಬೇಡಿ.
ಮಾಡಿದ್ರೆ ಒಂದಲ್ಲ ಒಂದು ದಿನ ನೀವು ಅನುಭವಿಸ್ತೀರಾ ಎಂದು ತನ್ನ ಅಸಹಾಯಕತೆಯ ಮನದಾಳದ ನೋವನ್ನ ಹೊರಹಾಕಿದ್ದಾರೆ. ಪ್ರಬಾವಕ್ಕೆ ಮಣಿದ ಎಸ್ಪಿ: ತನ್ನ ಇಲಾಖೆಯ ಅದೀನ ಸಿಬ್ಬಂದಿ ಮೇಲೆ ಆದ ಹಲ್ಲೇಕೊರನ್ನ ಬಂದಿಸೋದು ಬಿಟ್ಟು ಎಸ್ಪಿ ಅವರೂ ಮೌನವಾಗಿರೊದು ನೋಡಿದರೆ ಯಾವ್ದೊ ಪ್ರಲೋಭನೆಗೊ,ಪ್ರಭಾವಕ್ಕೊ ಮಣಿದಂತೆ ಕಾಣುತ್ತಿದೆ.ಇಲಾಖೆ ತನ್ನದೆ ಆದ ತಾಂತ್ರಿಕತೆ ಬಳಸಿ ಆರೋಪಿ ಎಲ್ಲಿದ್ದಾನೆ ಎಂಬುದನ್ನಕೇವಲ ಐದಾರು ಗಂಟೆಯಲ್ಲಿ ಪತ್ತೆ ಹಚ್ಚುವಾಗ ಆರೋಪಿಯನ್ನ ಹಿಡಿಯಲು ಆದೇಶಿಸದೆ ಮೌನವಾಗಿರೊದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇವರಿಗೂ ಇಂತ ಹಲ್ಲೆಗಳಾದಾಗ ಸುಮ್ಮನಿರುತ್ತಿದ್ದರಾ.? ಆರೋಪಿಯನ್ನ ತಪ್ಪಿಸಿಕೊಂಡು ಆಂಟಿಸಿಪೇಟರಿ ಬೇಲ್ ತರೊ ತನಕ ಸುಮ್ಮನಿರುವಂತೆ ಕೆಳ ಹಂತದ ಸಿಬ್ವಂದಿಗಳಿಗೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅವರಾಗಲಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಉತ್ತರಿಸಬೇಕಾಗಿದೆ.