ಬೆಂಗಳೂರು : ವಿಚ್ಚೆದಿತ ಪತಿ ಜೊತೆಗೆ ಮಗು ಸೇರಬಾರದು ಎಂಬು ಉದ್ದೇಶದಿಂದ 4 ವರ್ಷದ ಕಂದಮ್ಮನನ್ನೇ ತಾಯಿಯೊಬ್ಬಳು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಚಿನ್ಮಯ್ ಶವವನ್ನು ಅಂಬುಲೆನ್ಸ್ ನಲ್ಲಿ ಹರಿಶ್ಚಂದ್ರ ಘಾಟಿಗೆ ಯಶವಂತಪುರ ಅಪಾರ್ಟ್ಮೆಂಟ್ ಇಂದ ಶವ ಇದೀಗ ಶಿಫ್ಟ್ ಆಗಿದೆ.
ನಿನ್ನೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನೆರವೇರಿಸಲಾಗಿದ್ದು ನಂತರ ಮಧ್ಯರಾತ್ರಿ ಒಂದು ಮೂವತ್ತಕ್ಕೆ ಆಂಬುಲೆನ್ಸ್ ಮುಖಾಂತರ ಯಶವಂತಪುರದ ಬ್ರಿಗೇಡ್ ಗೇಟ್ ಬಳಿ ಇರುವ ವೆಂಕಟರಮಣ ನಿವಾಸಕ್ಕೆ ಮಗುವಿನ ಮೃತದೇಹ ರವಾನಿಸಲಾಗಿತ್ತು ಈ ವೇಳೆ ಮಗುವಿನ ತಂದೆ ವೆಂಕಟರಮಣ ಅವರು ಕಾರಿನಲ್ಲಿ ಆಂಬುಲೆನ್ಸ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದರು.
ಇದೀಗ ನಿವಾಸದಿಂದ ಎಂಬುಲೆನ್ಸ್ ಮುಖಾಂತರ ಹರೀಶ್ ಚಂದ್ರಘಾಟಿಗೆ ಯಶವಂತಪುರ ಅಪಾರ್ಟ್ಮೆಂಟ್ ಇಂದ ಮೃತ ದೇಹ ಶಿಫ್ಟ್ ಆಗಿದ್ದು ಕೆಲವೇ ಹೊತ್ತಿನಲ್ಲಿ ಬಾಲಕ ಚಿನ್ಮಯ್ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಆರು ದಿನಗಳವರೆಗೆ ಕೊಲೆ ಪಾತಗಿ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿಯನ್ನು ಗೋವಾಗೆ ಕರೆದುಕೊಂಡು ಹೋಗಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಘಟನೆ ನಡೆದಿರುವಂತಹ ಅಪಾರ್ಟ್ಮೆಂಟ್ ನಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.