ತುಮಕೂರು : ವಿ.ಸೋಮಣ್ಣ ಕೇಂದ್ರ ಸಚಿವರಾದ ಬಳಿಕ ತುಮಕೂರಿಗೆ ಕೇಂದ್ರ ಸರ್ಕಾರ ಬಹುಮಾನಗಳ ಮೇಲೆ ಬಹುಮಾನ ನೀಡುತ್ತಿದೆ.ಕಳೆದ ತಿಂಗಳಷ್ಟೇ ಜಿಲ್ಲೆಯ 5 ಮೇಲ್ಸೇತುವೆ ನಿರ್ಮಾಣಕ್ಕೆ ಬರೋಬ್ಬರಿ 350 ಕೋಟಿ ರೂ. ರೇಲ್ವೆ ಸಚಿವಾಲಯ ಅನುಮೋದನೆ ನೀಡಿತ್ತು. ಇದೀಗ ಮತ್ತೆ 60ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನ ಮೂರು ರೈಲ್ವೆ ಕಾಮಗಾರಿಗಳ ನಿರ್ಮಾಣಕ್ಕೆ ಕೇಂದ್ರ ಅಸ್ತು ಎಂದಿದೆ.
ಹೌದು ತುಮಕೂರಿಗೆ ಮೂರು ರೈಲ್ವೆ ಕಾಮಗಾರಿಗಳನ್ನು ಕೇಂದ್ರ ಮಂಜೂರು ಮಾಡಿದೆ. ಕೇಂದ್ರ ರೈಲ್ವೆ ಸಚಿವಾಲಯದಿಂದ ಮೂರು ಪ್ರಮುಖ ಕಾಮಗಾರಿ ಮಂಜೂರು ಮಾಡಲಾಗಿದೆ. ಒಟ್ಟು 60 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಗಳು ನಿರ್ಮಾಣವಾಗಲಿವೆ ಎಂದು ತಿಳಿದುಬಂದಿದೆ.
ಈ ಕುರಿತು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ ಸೋಮಣ್ಣ ಮಾಹಿತಿ ನೀಡಿದ್ದಾರೆ. ಕಲ್ಲಿಪಾಳ್ಯ ರಸ್ತೆಯಲ್ಲಿ 13.44 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಪಾಸ್ ಹಾಗೂ ಬಂಡಿಹಳ್ಳಿ ಗೇಟ್ ರಸ್ತೆಯಲ್ಲಿ 10.1 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಅಲ್ಲದೆ ಬೆಂಚೆಗೆರೆ ಗೇಟ್ ರಸ್ತೆಯಲ್ಲಿ 36 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣವಾಗಲಿದೆ.