Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

ಸ್ಮಾರ್ಟ್‌ಫೋನ್ ಖರೀದಿಸುವಾಗ ಜಾಗ್ರತೆ! ಅಸಲಿ ಮತ್ತು ನಕಲಿ ಮೊಬೈಲ್ ಪತ್ತೆಹಚ್ಚಲು ಪ್ರತಿಯೊಬ್ಬರೂ ತಿಳಿಯಬೇಕಾದ 5 ಸುಲಭ ವಿಧಾನಗಳು ಇಲ್ಲಿವೆ!

BREAKING: ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ | silver bar imports

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
KARNATAKA

ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

By ವಸಂತ ಬಿ ಈಶ್ವರಗೆರೆ

ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಕ್ರಿಕೆಟ್ ಪ್ರೇಮಿಗಳ ಸಾವಿಗೆ ಕಾರಣವಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ಹೊರ ಹಾಕಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಒತ್ತಾಯ ಮಾಡಿದ್ದಾರೆ.

ಅಲ್ಲದೆ, ಡಿಸಿಎಂ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲ್ತುಳಿತ ದುರಂತದ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಮುಖ್ಯಮಂತ್ರಿಗೆ ಧೈರ್ಯ ಎನ್ನುವುದು ಇದ್ದರೆ ತಕ್ಷಣವೇ ಅವರನ್ನು ಸಂಪುಟದಿಂದ ಆಚೆ ಹಾಕಬೇಕು ಎಂದು ಆಗ್ರಹಿಸಿದರು.

ತನಗೆ ಪಿಆರ್ ಮಾಡುತ್ತಿರುವ ಕಂಪನಿಯೊಂದು ಬರೆದುಕೊಟ್ಟ ಸ್ಕ್ರಿಪ್ಟ್ ನಂತೆ ಅವರು ಬುಧವಾರ ಇಡೀ ದಿನದ ಡ್ರಾಮಾ ನಡೆಸಿದರು. ಇದು ಅಸೂಕ್ಷ್ಮತೆಯ ಪರಮಾವಧಿ. ವಿಮಾನ ನಿಲ್ದಾಣದಲ್ಲಿ, ವಿಧಾನಸೌಧದ ಮುಂದೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ವ್ಯಕ್ತಿ ವರ್ತಿಸಿದ ರೀತಿ ನೋಡಿದರೆ ಅವರಿಗೆ ಯಾವುದೇ ರೀತಿಯ ಮಾನವೀಯತೆಯ ಗುಣಗಳು ಇಲ್ಲ. ಸಾವಿನಲ್ಲಿಯೂ ಪ್ರಚಾರಕ್ಕೆ ಹಪಾಹಪಿಸಿದ ವ್ಯಕ್ತಿ ಎಂದು ಅವರು ಆರೋಪಿಸಿದರು.

ವಿಧಾನನೌಧ ಮೆಟ್ಟಿಲು ಮೇಲೆ ಇವರು ಕಾರ್ಯಕ್ರಮ ಮಾಡಿದ ಉದ್ದೇಶ ಏನು? ಇಡೀ ಸರ್ಕಾರ ಅದನ್ನು ಕುಟುಂಬ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿತ್ತು. ಅದು ಕೇವಲ ಡಿಸಿಎಂ ದಾದಾಗಿರಿಯ ಶೋ ಆಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹಲವರ ಜೀವ ಹೋಗಿದೆ ಎಂಬ ವಿಷಯ ಗೊತ್ತಾದ ಮೇಲೆಯೂ ಇವರು ಅಲ್ಲಿ ಕಾರ್ಯಕ್ರಮ ನಡೆಸಿದರು ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈ ವ್ಯಕ್ತಿ ತೆವಲಿಗೆ ಅನೇಕ ಅಮಾಯಕರ ಪ್ರಾಣಗಳು ಹೋದವು. ಈತ ಒಬ್ಬ ರೌಡಿಯಂತೆ ವರ್ತಿಸಿದ್ದಾರೆ. ತನ್ನ ಶೋಕಿಗೆ ಇಷ್ಟು ಜನರನ್ನು ಬಲಿ ಕೊಟ್ಟಿದ್ದಾರೆ. ಸರ್ಕಾರದ ಹೊಣೆಗೇಡಿತನ ಹಾಗೂ ಡಿಸಿಎಂ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇಷ್ಟು ಜೀವಗಳನ್ನು ಬಲಿ ಕೊಟ್ಟರು. ಇದಕ್ಕೆ ಸರ್ಕಾರವೇ ಹೊಣೆ. ವಿಧಾನಸೌಧದ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮದಂತೆ ಮಾಡಿಕೊಂಡಿದ್ದರು. ಈಗ ಕೇವಲ ತನಿಖೆಗೆ ಆದೇಶ ಕೊಟ್ಟು, ಮೃತರಿಗೆ ಪರಿಹಾರ ನೀಡಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಡಿಸಿಎಂ ಕರ್ನಾಟಕದ ಸೂಪರ್ ಚೀಫ್ ಮಿನಿಸ್ಟರ್ ರೀತಿ ವರ್ತಿಸಿದ್ದಾರೆ. ಅವರೇ ದುರಂತಕ್ಕೆ ನೇರ ಹೊಣೆ. ಆರ್ ಸಿಬಿ ಗೆಲುವಿನ ಕ್ರೆಡಿಟ್ ಪಡೆದುಕೊಳ್ಳಲು ಇಷ್ಟು ಮಾಡಿದ ಡಿಸಿಎಂ ಆಗಿರುವ ದುರಂತದ ಹೊಣೆಯನ್ನು ಹೊರಲೇಬೇಕು. ಅವರು ಇಡೀ ತಂಡವನ್ನೇ ಹೈಜಾಕ್ ಮಾಡಿದರು. ಪೊಲೀಸರನ್ನು ಹತ್ತಿರಕ್ಕೆ ಬರದಂತೆ ತಡೆದರು ಎಂದು ಸಚಿವರು ಆರೋಪಿಸಿದರು.

ವಿಧಾನಸೌಧದ ಮೆಟ್ಟಿಲು ಮೇಲೆ ನಡೆದ ಕಾರ್ಯಕ್ರಮದ ಮೇಲೆ ಬಂದಿದ್ದ ಜನರನ್ನು ವೇದಿಕೆಯ ಮೇಲೆ ಕತ್ತು ಹಿಡಿದು ತಳ್ಳುತ್ತಾರೆ. ಇಂಥ ವ್ಯಕ್ತಿಯನ್ನು ನಾವು ಮನುಷ್ಯ ಎಂದೂ ಕರೆಯಲು ಆಗುತ್ತದೆಯೇ? ಎಂದರು ಅವರು.

ಇವರೇ ಜನರಿಗೆ ಹೇಳಿಕೊಂಡು, ಇವರೆ ಜನರನ್ನು ಸೇರಿಸಿ, ಪೊಲೀಸರು ಎರಡು ಕಡೆ ಕಾರ್ಯಕ್ರಮ ಬೇಡ ಎಂದರೂ ಕೇಳದೆ ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ವಿಧಾನಸೌಧ ಮುಂದೆ ಇವರ ಮಕ್ಕಳು, ಮೊಮ್ಮಕ್ಕಳು, ಅಧಿಕಾರಿಗಳು, ಅವರ ಮಂದಿ ಮಾಗದರೂ ಸೇರಿದ್ದರು. ಇವರು ಶೋ ಮಾಡಲಿಕ್ಕೆ ಇವರು ಇಡೀ ಆರ್ ಬಿಐ ಗೆಲುವನ್ನು ಬಳಕೆ ಮಾಡಿಕೊಂಡರು. ಆಟಗಾರರನ್ನು ಪಕ್ಕಕ್ಕೆ ತಳ್ಳಿ ಇವರೇ ಮಿಂಚಿದ್ದಾರೆ ಎಂದು ಅವರು ದೂರಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುಚ್ಚಿಸಿದ್ದರು. ಮೊದಲೇ ಅಭಿಮಾನಿಗಳನ್ನು ಮೈದಾನದೊಳಕ್ಕೆ ಬಿತ್ತಿದ್ದಿದ್ದರೆ ಈ ಸಮಸ್ಯೆ ಸೃಷ್ಟಿ ಆಗುತ್ತಿರಲಿಲ್ಲ. ಅವರೇ ಮೈದಾನದ ಬಾಗಿಲು ಬಂದ್ ಮಾಡಲು ಹೇಳಿದ್ದರು. ಡಿಸಿಎಂ ತಮ್ಮ ವರ್ಚಸ್ಸು ವೃದ್ಧ ಮಾಡಿಕೊಳ್ಳಲು ಇವರು ಇಷ್ಟೆಲ್ಲಾ ಮಾಡಿದ್ದಾರೆ. ಬೇರೆ ಮಂತ್ರಿಗಳು ಇರಲಿಲ್ಲವೇ? ಕ್ರೀಡಾಮಂತ್ರಿ ಎಲ್ಲಿ ಹೋದರು? ಅವರಿಗೆ ಜವಾಬ್ದಾರಿ ಇರಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿರುವ ಲೋಪಗಳ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಿದೆ. ಅತ್ಯಂತ ಧಾರುಣವಾದ ಸಂಗತಿ ಎಂದರೆ, ಕ್ರೀಡಾಂಗಣದ ಹೊರಗೆ ಮೃತದೇಹಗಳು ಬಿದ್ದಿದ್ದರೂ ಇವರು ಮೆರವಣಿಗೆಯಲ್ಲಿ ಮೈದಾನಕ್ಕೆ ತೆರಳಿ ಇವರೇ ಕಪ್ ಗೆದ್ದಂತೆ, ಇವರೇ ಆರ್ ಸಿಬಿ ಕ್ಯಾಪ್ಟನ್ ಎನ್ನುವಂತೆ ಆಟಗಾರರ ಮುಂದೆ ಕಪ್ ಗೆ ಮುತ್ತಿಡುತ್ತಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಇವತ್ತು ಇವರಿಗೆ ಕಣ್ಣಲ್ಲಿ ನೀರು ಬಂದಿದೆ. ಘಟನೆ ನಡೆದ ಹದಿನಾರು ಗಂಟೆಗಳ ನಂತರ ಇವರಿಗೆ ಕಣ್ಣೀರು ಬಂದಿದೆ. ಇವರು ಎಂತಹ ಕಟುಕರು ಎನ್ನುವುದು ಇದರಿಂದ ಅರ್ಥವಾಗುತ್ತದೆ. ತನಿಖೆ ಎನ್ನುವುದು ಕೇವಲ ಜನರ ಕಣ್ಣೊರೆಸುವ ತಂತ್ರ ಅಷ್ಟೇ. ರಾಜಕೀಯದ ಪ್ರಶ್ನೆ ಇಲ್ಲ. ಈ ಮುಖ್ಯಮಂತ್ರಿಗೆ ನಾಡಿನ ಜನರ ಬಗ್ಗೆ ಗೌರವ ಇದ್ದರೆ, ಮೊದಲು ಈ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರಕ್ಕೆ ಹಾಕಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಗೃಹ ಸಚಿವರು ಎನ್ನುವವರು ರಾಜ್ಯದಲ್ಲಿ ಇಲ್ಲವೇ ಇಲ್ಲ. ಕೂರು ಎಂದರೆ ಕೂರು, ಏಳು ಎಂದರೆ ಏಳುತ್ತಾರೆ. ಕೇವಲ ಡ್ರಿಲ್ ಮಾಡುವ ಹೊಮ್ ಮಿನಿಸ್ಟರ್ ರಾಜ್ಯದಲ್ಲಿ ಇದ್ದಾರೆ. ಅವರಿಗೆ ಧೈರ್ಯ ಇಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಲಹೆ ಧಿಕ್ಕರಿಸಿ ಸರ್ಕಾರ ನಡೆದುಕೊಂಡಿದೆ ಎಂದು ಅವರು ಹೇಳಿದರು.

ಒಬ್ಬ ಜಿಲ್ಲಾಧಿಕಾರಿ ಏನು ತನಿಖೆ ಮಾಡಲು ಸಾಧ್ಯ? ಅದರಿಂದ ಏನು ಉಪಯೋಗ? ಸರ್ಕಾರ ಹೇಳಿದಂತೆ ಅವರು ಬರೆದುಕೊಡುತ್ತಾರೆ. ಇವರಿಗೆ ಪರ್ಮನೆಂಟ್ ಆಗಿ ಒಬ್ಬರು ಇದ್ದಾರಲ್ಲ, ಅವರ ನೇತೃತ್ವದಲ್ಲಿಯೇ ಒಂದು ಆಯೋಗ ಮಾಡಬೇಕಿತ್ತು. ಏಕೆ ಮಾಡಲಿಲ್ಲವೋ ಗೊತ್ತಿಲ್ಲ ಎಂದ ಸಚಿವರು; ವಿಧಾನಸೌಧ ಬಳಿಯೇ ಇವರ ಬಂಧು ಬಳಗ ಹಾವಳಿ ಹೆಚ್ಚಾದಾಗ ಕ್ರಿಕೆಟ್ ಪ್ರೇಮಿಗಳ ಸಹನೆ ಕಟ್ಟೆಯೊಡೆದಿದೆ. ಅಲ್ಲಿಯೇ ಜನ ಕಲ್ಲು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ನಾಲ್ಕು ಜನ ಸತ್ತ ಮೇಲೆಯೂ ಡಿಸಿಎಂ ಎನ್ನುವ ಈ ವ್ಯಕ್ತಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಕಪ್ ಗೆ ಮುತ್ತಿಟ್ಟರು. ಅದು ಈ ವ್ಯಕ್ತಿಯ ನಡವಳಿಕೆ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

2 Mins Read

ಬೆಲೆ ಏರಿಕೆ ವಿರುದ್ಧ ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಎತ್ತಿನಗಾಡಿ ಚಳುವಳಿ: ‘ಕರ್ನಾಟಕ ಬಂದ್’ ಎಚ್ಚರಿಕೆ!

2 Mins Read

ಮಂಡ್ಯದ ಗೆಜ್ಜಲಗೆರೆ ಹೋರಾಟ: ರೈತ ಮುಖಂಡರ ಜೊತೆಗೆ ಶಾಸಕ ಕೆ.ಎಂ. ಉದಯ್ ಚರ್ಚೆ

2 Mins Read
Recent News

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

ಸ್ಮಾರ್ಟ್‌ಫೋನ್ ಖರೀದಿಸುವಾಗ ಜಾಗ್ರತೆ! ಅಸಲಿ ಮತ್ತು ನಕಲಿ ಮೊಬೈಲ್ ಪತ್ತೆಹಚ್ಚಲು ಪ್ರತಿಯೊಬ್ಬರೂ ತಿಳಿಯಬೇಕಾದ 5 ಸುಲಭ ವಿಧಾನಗಳು ಇಲ್ಲಿವೆ!

BREAKING: ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ | silver bar imports

Shocking: ಕೇವಲ 2,000 ರೂ. ಮನೆ ಬಾಡಿಗೆ ಕೊಡಲಾಗದಿದ್ದಕ್ಕೆ ಪತ್ನಿ, ಅಪ್ರಾಪ್ತ ಮಗಳ ಮೇಲಿನ ಅತ್ಯಾಚಾರಕ್ಕೆ ಸಾಥ್ ನೀಡಿದ ಪಾಪಿ ಪತಿ!

State News
KARNATAKA

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಮೂರನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಡಿಯಲ್ಲಿ ದೇಶದ 16 ರಾಜ್ಯಗಳು ಹಾಗೂ…

ಬೆಲೆ ಏರಿಕೆ ವಿರುದ್ಧ ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಎತ್ತಿನಗಾಡಿ ಚಳುವಳಿ: ‘ಕರ್ನಾಟಕ ಬಂದ್’ ಎಚ್ಚರಿಕೆ!

ಮಂಡ್ಯದ ಗೆಜ್ಜಲಗೆರೆ ಹೋರಾಟ: ರೈತ ಮುಖಂಡರ ಜೊತೆಗೆ ಶಾಸಕ ಕೆ.ಎಂ. ಉದಯ್ ಚರ್ಚೆ

ಬಿಡದಿ ಟೌನ್‌ಶಿಪ್ ಪ್ರಾಜೆಕ್ಟ್ ಬಿಟ್ಟುಬಿಡಿ: ಹೆಚ್.ಡಿ. ಕುಮಾರಸ್ವಾಮಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಹೆಚ್‌ಡಿಡಿ ಪತ್ರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.