ಬೆಂಗಳೂರು : ಕರ್ನಾಟಕದಲ್ಲಿ ಇಂದು ಆರ್ಥಿಕ ಸವಾಲುಗಳು ಎದುರಾಗಿರುವುದಕ್ಕೆ ಕೇಂದ್ರ ನಮ್ಮ ರಾಜ್ಯಕ್ಕೆ ನೀಡುವಂತಹ ಅನುದಾನದ ಪಾಲನ್ನು ಸರಿಯಾಗಿ ನೀಡದೇ ಇರುವುದಕ್ಕೆ ಇದೀಗ ಈ ಪರಿಸ್ಥಿತಿ ಎದುರಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದ ಸಂದರ್ಶನ ಒಂದರಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಕರ್ನಾಟಕದ ಆರ್ಥಿಕ ಪರಿಸ್ಥಿತಿ ಅಷ್ಟು ಸಮಾಧಾನಕರವಾಗಿಲ್ಲ. ಸಾಕಷ್ಟು ಸವಾಲುಗಳು ನಮ್ಮ ಮುಂದೆ ಇವೆ. ಇವೆಲ್ಲ ಸವಾಲುಗಳು ಬಂದಿರುವುದು ಕೇಂದ್ರ ಸರ್ಕಾರ ಕರ್ನಾಟಕ ಮಾಡುತ್ತಿರುವ ಅನ್ಯಾಯದಿಂದ ಎಂದು ವಾಗ್ದಾಳಿ ನಡೆಸಿದರು.
ವರ್ಷಕ್ಕೆ ನಮಗೆ 40 ರಿಂದ 50 ಸಾವಿರ ಕೋಟಿ ಕೋಟಿ ರೂಪಾಯಿ ಅಷ್ಟು ಕೇಂದ್ರ ಸರ್ಕಾರದಿಂದ ಬರಬೇಕಾಗಿದೆ.ಅಂತಹ ಅನುದಾನಗಳನ್ನು ನೀಡದೆ ವ್ಯವಸ್ಥಿತವಾಗಿ ಹಾಲಿ ಕೇಂದ್ರ ಸರ್ಕಾರ ನಮಗೆ ವಂಚನೆ ಮಾಡಿದೆ.ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನಮ್ಮ ಹಕ್ಕು ನಮ್ಮ ಪಾಲು ಸರಿಯಾಗಿ ಕೊಡುತ್ತಿಲ್ಲ.ಇದರಿಂದ ನಮ್ಮ ಕರ್ನಾಟಕದಲ್ಲಿ 40 ರಿಂದ 50 ಸಾವಿರ ಕೋಟಿ ಗೋತಾ ಆಗುತ್ತಿದೆ ಎಂದರು.
‘ಹೋಳಿ ಹಬ್ಬ’ಕ್ಕೆ ಊರಿಗೆ ಹೋಗುವ ‘ರೈಲ್ವೆ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ವಿಶೇಷ ರೈಲು’ಗಳ ಸಂಚಾರ
ಆದರಿಂದ ಕರ್ನಾಟಕದ ಆರ್ಥಿಕ ವ್ಯವಸ್ಥೆಯ ಮೇಲೆ ಒಂದು ಸಂಕಷ್ಟದ ವಾತಾವರಣ ಬಂದು ನಿಂತಿದೆ.ಸಾಕಷ್ಟು ಸವಾಲುಗಳು ನಿರ್ಮಾಣವಾಗಿದೆ ಏಕೆಂದರೆ ಕೇಂದ್ರ ಸರ್ಕಾರಕ್ಕೆ ನಮಗೆ ಸಮನಾಗಿ ಅನುದಾನ ಕೊಡಿ ಅಂತ ಕೇಳುತ್ತಿಲ್ಲ.ನಮಗೆ ಕನಿಷ್ಠ ಅವಶ್ಯಕತೆ ಎಷ್ಟಿದೆ ಅಷ್ಟು ಅನುದಾನ ಕೊಟ್ಟರೆ ಸಾಕು. ಆದರೆ ತಾರತಮ್ಯ ಮಾಡಿದ್ದರಿಂದ ಇವೆಲ್ಲ ಸಮಸ್ಯೆ ಆಗಿರುವುದು ಎಂದರು.
ಅಲ್ಲದೆ ಇದೆ ವಿಷಯವಾಗಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ನಾನು ಹೇಳಿದ್ದೆ ಇದು ನಿಮ್ಮ ತಪ್ಪಲ್ಲ ಕೇಂದ್ರ ಸರ್ಕಾರದ ಅನುದಾನ ತಾರತಮ್ಯದಿಂದ ಆರ್ಥಿಕ ಸವಾಲುಗಳು ಬಂದಿವೆ ಎಂದು ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಾನು ಹೇಳಿದ್ದೆ ಎಂದು ತಿಳಿಸಿದರು.