ಬೆಂಗಳೂರು: ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ. ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ. ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ ‘ಸ್ಪಂದನೆ’ ಇಲ್ಲದಾಗಿದೆ ಬಿಜೆಪಿಗೆ ( BJP ) ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿ ವಿರುದ್ಧ ಕಿಡಿಕಾರಿದೆ.
ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ.
ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ.ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ.
ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ 'ಸ್ಪಂದನೆ' ಇಲ್ಲದಾಗಿದೆ @BJP4Karnataka ಗೆ.#BJPBrashtotsava
— Karnataka Congress (@INCKarnataka) September 10, 2022
ಈ ಕುರಿತು ಸರಣಿ ಟ್ವಿಟ್ ಮಾಡಿದ್ದು, ಬಿಜೆಪಿ ಹೇಳಿದ್ದು – ಗೋರಕ್ಷಣೆ ಮಾಡಿದ್ದು – ಗೋವಿನ ಹೆಸರಲ್ಲಿ ಕಮಿಷನ್ ಭಕ್ಷಣೆ. ಸರ್ಕಾರ ಗೋಶಾಲೆಗಳನ್ನು ನಿರ್ಮಿಸುವುದು ದೂರದ ಮಾತು ಕನಿಷ್ಠ ಗೋವುಗಳಿಗೆ ನ್ಯಾಯಯುತವಾಗಿ ಮೇವನ್ನೂ ಕೊಡಲಿಲ್ಲ. ಮೇವು ಪೂರೈಕೆದಾರರ ಹಣ ಬಿಡುಗಡೆಗೆ 8.5% ಕಮಿಷನ್ ಕೇಳಿದ ಬಿಜೆಪಿಯ ನಡೆ ಗೋಭಕ್ಷಣೆಗಿಂತ ಭಿನ್ನವೇನಲ್ಲ ಎಂದಿದೆ.
ಬಿಜೆಪಿ
ಹೇಳಿದ್ದು – ಗೋರಕ್ಷಣೆ
ಮಾಡಿದ್ದು – ಗೋವಿನ ಹೆಸರಲ್ಲಿ ಕಮಿಷನ್ ಭಕ್ಷಣೆ.ಸರ್ಕಾರ ಗೋಶಾಲೆಗಳನ್ನು ನಿರ್ಮಿಸುವುದು ದೂರದ ಮಾತು ಕನಿಷ್ಠ ಗೋವುಗಳಿಗೆ ನ್ಯಾಯಯುತವಾಗಿ ಮೇವನ್ನೂ ಕೊಡಲಿಲ್ಲ.
ಮೇವು ಪೂರೈಕೆದಾರರ ಹಣ ಬಿಡುಗಡೆಗೆ 8.5% ಕಮಿಷನ್ ಕೇಳಿದ ಬಿಜೆಪಿಯ ನಡೆ ಗೋಭಕ್ಷಣೆಗಿಂತ ಭಿನ್ನವೇನಲ್ಲ.#BJPBrashtotsava pic.twitter.com/uQp0NEtqfl
— Karnataka Congress (@INCKarnataka) September 10, 2022
40% ಕಮಿಷನ್ ಹಣದಲ್ಲಿ ನಡೆಯುತ್ತಿರುವ #BJPBrashtotsava ಕ್ಕೆ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ. ಸಮಾವೇಶದ ವೇದಿಕೆ ಅಲಂಕಾರದ ಖರ್ಚಿನಲ್ಲಿ ಮೃತ ಅಂಕಿತಾಳಿಗೆ ಪರಿಹಾರ ನೀಡಬಹುದಿತ್ತು. ಹಾಡು, ನೃತ್ಯಗಳ ಖರ್ಚಿನಲ್ಲಿ ಬೆಂಗಳೂರಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು. ರಸ್ತೆ ಗುಂಡಿಗೆ ಬಲಿಯದವರಿಗೆ ಪರಿಹಾರ ನೀಡಬಹುದಿತ್ತು ಎಂದು ಹೇಳಿದೆ.
40% ಕಮಿಷನ್ ಹಣದಲ್ಲಿ ನಡೆಯುತ್ತಿರುವ #BJPBrashtotsava ಕ್ಕೆ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ.
ಸಮಾವೇಶದ ವೇದಿಕೆ ಅಲಂಕಾರದ ಖರ್ಚಿನಲ್ಲಿ ಮೃತ ಅಂಕಿತಾಳಿಗೆ ಪರಿಹಾರ ನೀಡಬಹುದಿತ್ತು.
ಹಾಡು, ನೃತ್ಯಗಳ ಖರ್ಚಿನಲ್ಲಿ ಬೆಂಗಳೂರಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು.
ರಸ್ತೆ ಗುಂಡಿಗೆ ಬಲಿಯದವರಿಗೆ ಪರಿಹಾರ ನೀಡಬಹುದಿತ್ತು.— Karnataka Congress (@INCKarnataka) September 10, 2022
ಗಂಗಾ ಕಲ್ಯಾಣ ಯೋಜನೆಯಲ್ಲಿ ಸ್ವಯಂ ಕಲ್ಯಾಣ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಶೋಷಿತರಿಗೆ ಅನ್ಯಾಯವೆಸಗಿದೆ. ಬೋರ್ ವೆಲ್ ಹಗರಣ ನಡೆದಿರುವುದು ಇಲಾಖಾ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಭೀತಾಗಿದೆ. ಶೋಷಿತ ಸಮುದಾಯಗಳ ಪಾಲಿನ ಹಣ ಲೂಟಿ ಹೊಡೆದಿದ್ದೇ ಸರ್ಕಾರದ ಸಾಧನೆಯೇ ಬಸವರಾಜ ಬೊಮ್ಮಾಯಿ ಅವರೇ? ಆ ಕಾರಣಕ್ಕಾಗಿ ಸಂಭ್ರಮಾಚರಣೆಯೇ? ಎಂದು ಪ್ರಶ್ನಿಸಿದೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ ಸ್ವಯಂ ಕಲ್ಯಾಣ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಶೋಷಿತರಿಗೆ ಅನ್ಯಾಯವೆಸಗಿದೆ.
ಬೋರ್ ವೆಲ್ ಹಗರಣ ನಡೆದಿರುವುದು ಇಲಾಖಾ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಭೀತಾಗಿದೆ.
ಶೋಷಿತ ಸಮುದಾಯಗಳ ಪಾಲಿನ ಹಣ ಲೂಟಿ ಹೊಡೆದಿದ್ದೇ ಸರ್ಕಾರದ ಸಾಧನೆಯೇ @BSBommai ಅವರೇ?
ಆ ಕಾರಣಕ್ಕಾಗಿ ಸಂಭ್ರಮಾಚರಣೆಯೇ?#BJPBrashtotsava pic.twitter.com/ZPh4bARKnT
— Karnataka Congress (@INCKarnataka) September 10, 2022