ಬೆಂಗಳೂರು: ಹಫ್ತಾ ನೀಡಿಲ್ಲವೆಂದು ಮೀನು ವ್ಯಾಪಾರಿ ಮೇಲೆ ಲಾಂಗ್ ಬೀಸಿರುವ ಘಟನೆ ಬಾಣಸವಾಡಿ ಬಳಿ ಇರುವ ಮೀನಿನ ವ್ಯಾಪಾರಿ ಮೇಲೆ ನಡೆದಿದೆ. ಪುಡಿ ರೌಡಿ ಸುದೇಶ ಎಂಬಾತ ಲಾಂಗ್ ಬೀಸಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಗಳ ಪ್ರಕಾರ ಸುದೇಶ ನುಗ್ಗಿ , ಅಂಗಡಿಯಲ್ಲಿದ್ದ ವ್ಯಕ್ತಿಯ ಮೇಲೆ ಲಾಂಗ್ ಬೀಸಿರುವುದನ್ನು ಕಾಣಬಹುದಾಗಿದೆ. ಅದೃಷ್ಟವಶಾತ್ ಅಂಗಡಿಯಲ್ಲಿದ್ದಾತ ಇದರಿಂದ ಕೂದಲೆಳೆ ಅಂತರದಲ್ಲಿ ಪರಾಗಿದೆ. ಸದ್ಯ ಬಾಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೋಲಿಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.