ಬೆಂಗಳೂರು : ಅಂದರ್ ಬಾಹರ್ ಆಡುತ್ತಿದ್ದ ಅಪಾರ್ಟ್ಮೆಂಟ್ ಒಂದರ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು ದಾಖಲೆ ಇಲ್ಲದ 86 ಲಕ್ಷಕ್ಕೂ ಹೆಚ್ಚು ನಗದು ಹಣವನ್ನು ಜಪ್ತಿ ಮಾಡಿಕೊಂಡು ಆರು ಜನರನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಜೆಜೆ ನಗರದ ಅಪಾರ್ಟ್ಮೆಂಟ್ ಅಲ್ಲಿ ನಡೆದಿದೆ.
ಅಪಾರ್ಟ್ಮೆಂಟ್ ನಲ್ಲಿ ಆರು ಜನರು ಸುಮಾರು 1,40,000ಕ್ಕೂ ಹೆಚ್ಚು ಹಣ ಇಟ್ಟು ಜೂಜಾಡುತ್ತಿದ್ದರು.ಈ ವೇಳೆ ಖಚಿತ ಮಾಹಿತಿಯ ಮೇರೆಗೆ ಸಿಸಿ ಬೇಧಿಕಾರಿಗಳು ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಸಿಸಿಬಿ ಅಧಿಕಾರಿಗಳು ಪರಿಶೀಲನೆ ವೇಳೆ ಶಾಕ್ ಆಗಿದ್ದು, ಸುಮಾರು 86, 87,800 ರೂಪಾಯಿ ದಾಖಲೆ ಇಲ್ಲದ ಹಣ ದೊರಕಿದೆ.
ದಾಳಿ ನಡೆದ ಕೂಡಲೇ ಅಪಾರ್ಟ್ಮೆಂಟ್ನ ಮಾಲೀಕ ತಕ್ಷಣ ಪರಾರಿಯಾಗಿದ್ದು, ಅಂದರ್ ಬಹಾರ್ ಆಡುತ್ತಿದ್ದ ಸುಮಾರು ಆರು ಜನರನ್ನು ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿ, ನಗದು ಹಣವನ್ನು ಜತ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.