ಬೆಂಗಳೂರು : ತಡರಾತ್ರಿ ಬೆಂಗಳೂರಿನ ರೌಡಿಗಳಿಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದು, 86 ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಆ್ಯಕ್ಟೀವ್ ಆಗಿರುವ ರೌಡಿಶೀಟರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮುಂದುವರೆದು. 26 ರೌಡಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇನ್ನುಮುಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪವರ್ ಕಟ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬುಧವಾರ ಮತ್ತು ನಾಳೆ ಗುರುವಾರದಂದು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಲವು ದುರಸ್ತಿ ಕಾಮಗಾರಿ, ಹಲವು ಯೋಜನೆ ಹಿನ್ನೆಲೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.
ಬೆಂಗಳೂರು, ದಾವಣಗೆರೆಯ ಈ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆ ವಿದ್ಯುತ್ ಕಡಿತವಾಗಲಿದೆ. ಇಂದು ದಾವಣಗೆರೆ ವೃತ್ತದ ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂ ಬಿ ಕೆರೆ ಮತ್ತು ಚಲುವಾದಿ ಕೆರೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.ನವೆಂಬರ್ 24 ಬೆಂಗಳೂರಿನ ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜ ಪೇಟೆ ವೃತ್ತ, ಗಡಿಯಾರ ಗೋಪುರ ಮತ್ತು ಮಹಾವೀರ್ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ದಾವಣಗೆರೆ ವೃತ್ತದ ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂಬಿ ಕೆರೆ ಮತ್ತು ಚಲುವಾದಿ ಕೆರೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಇಂದು ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ