ಬೆಂಗಳೂರು: ಮೂವತ್ತಕ್ಕೂ ಹೆಚ್ಚು ಕೇಸ್ಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿರುವ ಸೈಲೆಂಟ್ ಸುನೀಲ್ ಪತ್ತೆಗೆ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಸಿಸಿಬಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸೈಲೆಂಟ್ ಸುನಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಒಸಿಡಬ್ಲ್ಯೂ ವಿಭಾಗದ ಸಿಸಿಬಿ ಪೊಲೀಸರು ರೌಡಿಶೀಟರ್ ಸುನೀಲ್ ನನ್ನು ಪತ್ತೆ ಹಚ್ಚಲು ಅಖಾಡಕ್ಕೆ ಇಳಿದಿದ್ದಾರೆ.
ರಾಜಕಾರಣಿಗಳ ಮಧ್ಯೆ ದರ್ಬಾರ್
ಮೂವತ್ತಕ್ಕೂ ಹೆಚ್ಚು ಕೇಸ್ಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿರುವ ಸೈಲೆಂಟ್ ಸುನೀಲ ರಾಜಕಾರಣಿಗಳ ಮಧ್ಯೆ ದರ್ಬಾರ್ ನಡೆಸುತ್ತಿದ್ದಾರೆ . ಇತ್ತ ಪೊಲೀಸರು ಮಾತ್ರ ಕಣ್ಮುಂದೆ ರೌಡಿ ಇದ್ದರು ಸೈಲೆಂಟ್ ಆಗಿದ್ದಾರೆ. ಇದು ಬಾರಿ ಅನುಮಾನಕ್ಕೆ ಕಾರಣವಾಗಿದೆ.ಕೆಲದಿನಗಳ ಹಿಂದೆ ಬೆಂಗಳೂರಿನ 80ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ 23 ಪುಡಿರೌಡಿಗಳನ್ನು ವಶಕ್ಕೆ ಪಡೆದು ವಾರ್ನ್ ಮಾಡಿದ್ದರು. ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ, ಕಾಡಬೀಸನಹಳ್ಳಿ ಲೋಕಿ ದಾಳಿ ವೇಳೆ ಪರಾರಿಯಾಗಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ್ದರು. ಆದರೆ ನಿನ್ನೆ ರಾಜಕಾರಣಿಗಳ ಸಭೆಯಲ್ಲಿ ಸೈಲೆಂಟ್ ಸುನೀಲ ಪ್ರತ್ಯಕ್ಷನಾಗಿದ್ದಾನೆ.
ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಜೊತೆ ಪೊಲೀಸರು ಇದ್ದರು ಆದರೂ ಸುನೀಲ ರಾಜಾರೋಷವಾಗಿ ಮೆರೆದಾಡಿದ್ದಾನೆ. ಇದನ್ನು ಗಮನಿಸಿದಾಗ ರೌಡಿಶೀಟರ್ ಸೈಲೆಂಟ್ ಸುನೀಲನ ಬೆನ್ನಿಗೆ ಪ್ರಭಾವಿ ರಾಜಕಾರಣಿಗಳು ನಿಂತ್ರಾ ಎಂಬ ಅನುಮಾನ ಮೂಡಿದೆ.