ಬೆಂಗಳೂರು : ರಾಜಧಾನಿಯಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಖಾಸಗಿ ಬ್ಯಾಂಕ್ ಉದ್ಯೋಗಿ, 3 ವಿದೇಶಿ ಪ್ರಜೆಗಳು ಸೇರಿ ಆರು ಮಂದಿಯನ್ನು ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ.
ನೈಜೀರಿಯಾ ದೇಶದ ಆಗಸ್ಟೆನ್ ನಾನ್ನೊ, ಫ್ರೆಡೈಲಿಸ್, ಎರೇಂಜಿನ್ ಸ್ಟಾರ್ಟ್, ಮಡಿಕೇರಿ ಜಿಲ್ಲೆ ನಾಣಯ್ಯ, ವಿ.ವಿ.ಪುರದ ಕುಶಾಲ್ ಹಾಗೂ ಮಡಿವಾಳದ ವಿಶ್ವಾಸ್ ಬಂಧಿತರಾಗಿದ್ದು, ಆರೋ ಪಿಗಳಿಂದ MDMA, ಕ್ರಿಸ್ಟೆಲ್, ಕೊಕೆನ್, , ಎಲ್ ಎಸ್ ಡಿ ಚರಸ್ প্রơ, 12 ಕೆಜಿ ಗಾಂಜಾ, ಹ್ಯಾಶೀಶ್ ಆಯಿಲ್ ಸೇರಿ ಒಟ್ಟು 22.74 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಹಲವು ದಿನಗಳಿಂದ ನಗರದಲ್ಲಿ ಈ ಆರು ಮಂದಿ ಪೆಡ್ಡರ್‌ಗಳು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಸಿಬಿ ಕಾರ್ಯಾಚರಣೆ ನಡೆಸಿದೆ.
ಈ ವಿದೇಶಿ ಪ್ರಜೆಗಳು ಬಿಜಿನೆಸ್, ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರು. ಆನಂತರ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮೋಜಿನಜೀವನ ನಡೆಸಲು ಗೋಡಾ, ಮುಂಬೈ ಹಾಗೂ ದೆಹಲಿಯಲ್ಲಿ ನೆಲೆಸಿರುವ ತಮ್ಮ ದೇಶದ ಪ್ರಜೆ ಗಳಿಂದ ಎಂಡಿಎಂಎ ಕ್ರಿಸ್ಟೆಲ್ ಹಾಗೂ ಕೊಕೇನ್ ಖರೀದಿಸಿ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪೆಕ್ಟರ್ ಳನ್ನು ಬಂಧಿಸಲಾ ಯಿತು. ಕಾಟನ್‌ಪೇಟೆಯ ಬಿನ್ನಿಮಿಲ್ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಕುಖ್ಯಾತ ರೌಡಿ ವಿಶ್ವಾಸ್‌ನನ್ನು ಸಿಸಿಬಿ ಬಂಧಿಸಿದೆ. ಆರೋಪಿ ಯಿಂದ 14 ಲಕ್ಷದ ಡ್ರಗ್ಸ್ ಜಪ್ತಿ ಮಾಡಿದೆ.