ಬೆಳಗಾವಿ: ಬಿಜೆಪಿಯಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಡಿ.ಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿ ನಡೆಸಿಲ್ಲ. ಬದಲಾಗಿ ಇದು ಕೆಲವೊಮ್ಮೆ ರೊಟೀನ್ ನಡೆಯುತ್ತದೆ ಎಂಬುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಡಿಕೆಶಿ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿ ವಿಚಾರವಾಗಿ ಮಾತನಾಡಿ, ಬಿಜೆಪಿ ಅಧಿಕಾರ ದುರ್ಬಳಕೆ ಆ ರೀತಿಯಲ್ಲಿ ಇಲ್ಲ. ಕೆಲ ಸಮಯದಲ್ಲಿ ಪೊಲಿಟೀಶಿಯನ್ ರಾಜಕಾರಣ ಮಾತ್ರವಲ್ಲದೆ, ಬಿಸಿನೆಸ್ ಕೂಡ ಮಾಡುತ್ತಾರೆ. ಸಿಬಿಐ ದಾಳಿ ಕೆಲವೊಮ್ಮೆ ರೊಟೀನ್ ನಡೆಯುತ್ತದೆ. ಕಾನೂನು ಹೋರಾಟ ನಡೆಯುತ್ತದೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಬಿ.ಎಲ್.ಸಂತೋಷ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ: ಕರ್ನಾಟಕಕ್ಕೂ ನಿಮಗೂ ಸಂಬಂಧ ಏನು? ಏಕವಚನದಲ್ಲಿ ಕಿಡಿ
ರಮೇಶ್ ಜಾರಕಿಹೊಳಿ ಸಭೆಗೆ ಬರ್ತಿಲ್ಲ, ಬಿಜೆಪಿಯಲ್ಲೂ ಕಾಣಿಸಿಕೊಳ್ಳದ ವಿಚಾರವಾಗಿ ಮಾತನಾಡಿ, ಹಾಗೇನಿಲ್ಲ ಮಹೇಶ್ ಕುಮಟ್ಟಳ್ಳಿ ಮಗಳ ಮದುವೆ ಇತ್ತು. ರಮೇಶ್ ಅಲ್ಲಿ ಹೋಗಿದ್ದಾರೆ. ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ನಾಳೆಯಿಂದ ಸಭೆಗೆ ಬರಲಿದ್ದಾರೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡೋ ವಿಚಾರ ಪ್ರತಿಕ್ರಿಯಿಸಿದಂತ ಅವರು, ಅದು ಸಿಎಂ ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ. ಅದನ್ನ ರಮೇಶ್, ನಾವು ಒಪ್ಪುತ್ತೇವೆ. ಅಧಿವೇಶನಕ್ಕೆ ನಾಳೆ ಬರಬಹುದು, ಅಥಣಿ ಮದುವೆ ಇದ್ದ ಹಿನ್ನೆಲೆ ಹೋಗಿದ್ರು. ನಿರಂತರ ಸಮಸ್ಯೆ, ರೈತರ ಬಗ್ಗೆ ಚರ್ಚೆ ಇದೆ. ಕೆಲ ಮೀಸಲಾತಿ ಬಗ್ಗೆ ಚರ್ಚೆ ಮಾಡಬೇಕು. ಯಾವುದೇ ವಿಚಾರ ಇಟ್ಟುಕೊಂಡು ಗಲಾಟೆ ಬೇಡ. ವರ್ಷಕ್ಕೊಮ್ಮೆ ಈ ಭಾಗದಲ್ಲಿ ಸದನ ನಡೆಯುತ್ತೆ. ಬೆಳಗಾವಿಯಲ್ಲಿ ರಮೇಶ್ ಉತ್ತಮ ಕೆಲಸ ಮಾಡ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿಗೆ ಹೆಚ್ಚು ಶಕ್ತಿ ಇದೆ. ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಆ ಶಕ್ತಿಯನ್ನು ಈ ಭಾಗದ ಸಮಸ್ಯೆ ಬಗೆಹರಿಸಲು ಬಳಸಿಕೊಳ್ಳುತ್ತೇವೆ ಎಂದರು.
“ವಿದ್ಯಾರ್ಥಿವೇತನ” ಸ್ಥಗಿತ: ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಂದ ಸಿಹಿ ಸುದ್ದಿ