Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Another shooting at Kapil Sharma's cafe in Canada

BREAKING: ಕಪಿಲ್ ಶರ್ಮಾ ಕೆಫೆ ಸಮೀಪ ಬಿಷ್ಣೋಯ್ ಗ್ಯಾಂಗ್‌ನಿಂದ ಗುಂಡಿನ ದಾಳಿ: ಖ್ಯಾತ ಹಾಸ್ಯನಟನಿಗೆ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ ಲಾರೆನ್ಸ್ ಗ್ಯಾಂಗ್!

03/05/2026 7:02 AM

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

03/05/2026 6:59 AM

ಜನಗಣತಿ 2027: ಮಾಹಿತಿ ನೀಡುವಾಗ ಎಚ್ಚರ! ಈ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ; ದೂರು ನೀಡಲು ಹೀಗೆ ಮಾಡಿ

03/05/2026 6:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಾತಿಗಣತಿ ಸಮೀಕ್ಷೆ ಹಿನ್ನಲೆ: ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ ಸಮಯ ಬದಲಾವಣೆ ನಿಗದಿ
KARNATAKA

ಜಾತಿಗಣತಿ ಸಮೀಕ್ಷೆ ಹಿನ್ನಲೆ: ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ ಸಮಯ ಬದಲಾವಣೆ ನಿಗದಿ

By kannadanewsnow0907/10/2025 1:15 PM

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ ಮರು ನಿಗದಿ ಮಾಡಿ, ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಸುರಲ್ಕರ್ ವಿಕಾಸ ಕಿಶೋರ್ ಅವರು ಜ್ಞಾಪನಾದೇಶ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಕೈಗೊಳ್ಳುವುದು ಮತ್ತು ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ತಂತ್ರಾಂಶದ ಅಭಿವೃದ್ಧಿ ಮತ್ತು ಉಸ್ತುವಾರಿಯನ್ನು ಕೈಗೊಳ್ಳುವುದು, ಹಿಂದುಳಿದ ವರ್ಗಗಳ ಆಯೋಗವು ನಡೆಸುವ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿಕೊಂಡು ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು ಅಧಿಕಾರಿಗಳನ್ನು ಹಾಗೂ ಶಿಕ್ಷಕರನ್ನು ಹಾಗೂ ಇತರೆ ಸಿಬ್ಬಂದಿಗಳು ಕೆಲಸ ನಿರ್ವಹಿಸುವಂತೆ ಆದೇಶಿಸಿದ. ಸದರಿ ಆದೇಶದಂತೆ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

ಸಮೀಕ್ಷೆಯನ್ನು ಗ್ರೇಟರ್ ಬೆಂಗಳೂರು ಆಥಾರಿಟಿ ವ್ಯಾಪ್ತಿಯಲ್ಲಿ ದಿನಾಂಕ: 04-10-2025 ರಿಂದ ಪ್ರಾರಂಭಿಸಲಾಗಿದ್ದು, ರಾಜ್ಯದ ಇತರ ಭಾಗಗಳಲ್ಲಿ ದಿನಾಂಕ: 22-09-2025 ರಿಂದ ಪ್ರಾರಂಭಿಸಲಾಗಿದೆ.

ಸಮೀಕ್ಷೆಯು ಪೂರ್ಣಗೊಳ್ಳಲು ಹಚ್ಚಿನ ಕಾಲಾವಕಾಶದ ಅಗತ್ಯವಿರುವುದನ್ನು ಮನಗೊಂಡು, ದಿನಾಂಕ: 26.09.2025 ರಂದು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿರುವಂತೆ ಸಮೀಕ್ಷೆಯು ರಜಾ ಅವಧಿಯ ನಂತರವು ಮುಂದುವರೆಯುವ ಸಾಧ್ಯತೆ ಇರುವುದರಿಂದ ರಜಾ ಅವಧಿಯ ನಂತರ ಶಾಲೆ ನಡೆಯುವ ಸಮಯವನ್ನು ಪರೀಷ್ಕರಿಸಿ ಆದೇಶಿಸುವುದು ಸೂಕ್ತ ಎಂದು ತೀರ್ಮಾನಿಸಿ ಅದರಂತೆ ಕ್ರಮವಹಿಸಲು ನಿರ್ಧರಿಸಲಾಯಿತು.

ಸಮೀಕ್ಷೆ ಪೂರ್ಣಗೊಳಿಸಲು ಇನ್ನೂ ಹೆಚ್ಚಿನ ಕಾಲಾವಕಾಶದ ಅಗತ್ಯವಿರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ, ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಧ್ಯವಾರ್ಷಿಕ ರಜಾ ದಿನಗಳ ನಂತರ ಶಾಲಾ ತರಗತಿಗಳು ಸಮೀಕ್ಷೆಯ ಕಾರಣದಿಂದ ಕುಂಠಿತವಾಗಬಾರದು ಎನ್ನುವ ದೃಷ್ಟಿಯಿಂದ ಈ ಕೆಳಗಿನ ಸೂಚನೆಗಳಂತ ಕ್ರಮವಹಿಸುವುದು.

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ: ಈ ವ್ಯಾಪ್ತಿಯಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಿ: 8-10-2025 ರಿಂದ 24-10-2025 ರವರೆಗೆ ಶಾಲಾ ತರಗತಿಗಳನ್ನು ಬೆಳಿಗೆ 8.00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸುವುದು. ಸಮೀಕ್ಷೆಯನ್ನು ಕೈಗೊಂಡು ದಿನಾಂಕ: 24-10-2025 ರ ಅಂತ್ಯದೊಳಗೆ ಪೂರ್ಣಗೊಳಿಸುವುದು. • ರಾಜ್ಯದ ಇತರ ಭಾಗಗಳಲ್ಲಿ (ಗ್ರೇಟರ್ ಬೆಂಗಳೂರು ವ್ಯಾಪ್ತಿ ಹೊರತುಪಡಿಸಿ ಉಳಿದ ಭಾಗಗಳು): ಈ ವ್ಯಾಪ್ತಿಯಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಿ: 8-10-2025 ರಿಂದ 12-10-2025 ರವರೆಗೆ ಶಾಲಾ ತರಗತಿಗಳನ್ನು ಬೆಳಿಗ್ಗೆ 8.00 ಗಂಟೆಯಿಂದ ಅಪರಾಹ್ನ, 1.00 ಗಂಟೆಯವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸುವುದು. ಸಮೀಕ್ಷೆಯನ್ನು ರಜಾ ದಿನಗಳಲ್ಲಿಯೂ ಕೈಗೊಂಡು ದಿನಾಂಕ: 12-10-2025 ರ ಅಂತ್ಯದೊಳಗೆ ಪೂರ್ಣಗೊಳಿಸುವುದು. ಈ ಎಲ್ಲ ಅಂಶಗಳಂತೆ ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

03/05/2026 6:59 AM1 Min Read

Rain Alert : ರಾಜ್ಯದ 20 ಜಿಲ್ಲೆಗಳಲ್ಲಿ ಇನ್ನೂ 1 ವಾರ ಭಾರೀ ಮಳೆ : ಹವಾಮಾನ ಇಲಖಾಖೆ ಮುನ್ಸೂಚನೆ.!

03/05/2026 6:51 AM1 Min Read

ALERT : ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮಾಡಿದರೆ 1000 ರೂ. ದಂಡ ಫಿಕ್ಸ್.!

03/05/2026 6:45 AM1 Min Read
Recent News
Another shooting at Kapil Sharma's cafe in Canada

BREAKING: ಕಪಿಲ್ ಶರ್ಮಾ ಕೆಫೆ ಸಮೀಪ ಬಿಷ್ಣೋಯ್ ಗ್ಯಾಂಗ್‌ನಿಂದ ಗುಂಡಿನ ದಾಳಿ: ಖ್ಯಾತ ಹಾಸ್ಯನಟನಿಗೆ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ ಲಾರೆನ್ಸ್ ಗ್ಯಾಂಗ್!

03/05/2026 7:02 AM

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

03/05/2026 6:59 AM

ಜನಗಣತಿ 2027: ಮಾಹಿತಿ ನೀಡುವಾಗ ಎಚ್ಚರ! ಈ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ; ದೂರು ನೀಡಲು ಹೀಗೆ ಮಾಡಿ

03/05/2026 6:56 AM

Rain Alert : ರಾಜ್ಯದ 20 ಜಿಲ್ಲೆಗಳಲ್ಲಿ ಇನ್ನೂ 1 ವಾರ ಭಾರೀ ಮಳೆ : ಹವಾಮಾನ ಇಲಖಾಖೆ ಮುನ್ಸೂಚನೆ.!

03/05/2026 6:51 AM
State News
KARNATAKA

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

By kannadanewsnow5703/05/2026 6:59 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿಗಳಿಗೆ ದೊಡ್ಡ ಮಟ್ಟದ ಶುಭಸುದ್ದಿ ಸಿಕ್ಕಿದೆ. ರಾಜ್ಯಾದ್ಯಂತ ಖಾಲಿ ಇರುವ…

Rain Alert : ರಾಜ್ಯದ 20 ಜಿಲ್ಲೆಗಳಲ್ಲಿ ಇನ್ನೂ 1 ವಾರ ಭಾರೀ ಮಳೆ : ಹವಾಮಾನ ಇಲಖಾಖೆ ಮುನ್ಸೂಚನೆ.!

03/05/2026 6:51 AM

ALERT : ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮಾಡಿದರೆ 1000 ರೂ. ದಂಡ ಫಿಕ್ಸ್.!

03/05/2026 6:45 AM

ಸುಪ್ರೀಂ ಕೋರ್ಟ್ ವ್ಯಾಜ್ಯಗಳ ಇತ್ಯರ್ಥಕ್ಕೆ ಐತಿಹಾಸಿಕ ಹೆಜ್ಜೆ : ಆಗಸ್ಟ್ 21 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನ

03/05/2026 6:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.