Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನೈಜ ಪ್ರೇಮಿ ಯಾವತ್ತೂ ವಿಕೃತನಾಗಲ್ಲ’ : ಪ್ರೇಯಸಿ ಜತೆಗಿನ ಖಾಸಗಿ ಕ್ಷಣ ಸೆರೆಹಿಡಿದವನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

06/02/2026 12:13 PM

BREAKING: ಬಿಹಾರ ಚುನಾವಣೆ ರದ್ದು ಕೋರಿದ್ದ ಜನ್ ಸುರಾಜ್‌ಗೆ ಸುಪ್ರೀಂಕೋರ್ಟ್ ಚಾಟಿ: ಅರ್ಜಿದಾರರ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡಾಮಂಡಲ!

06/02/2026 12:02 PM

BIG NEWS : ಟಿಕೆಟ್ ಖರೀದಿಸಿದ ಸ್ಥಳದಿಂದಲೇ ಬೋರ್ಡಿಂಗ್ : ರೈಲ್ವೆ ನಿಯಮಗಳಲ್ಲಿ ಮಹತ್ವದ ಬದಲಾವಣೆ.!

06/02/2026 11:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗೋಲ್‍ ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆ: ಛಲವಾದಿ ನಾರಾಯಣಸ್ವಾಮಿ ಆರೋಪ
KARNATAKA

ಗೋಲ್‍ ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆ: ಛಲವಾದಿ ನಾರಾಯಣಸ್ವಾಮಿ ಆರೋಪ

By kannadanewsnow0915/01/2025 6:41 PM

ಬೆಂಗಳೂರು: ಭ್ರಷ್ಟಾಚಾರದ ಅನೇಕ ಹಗರಣಗಳು, ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ- ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಕಾಂಗ್ರೆಸ್ ಸರಕಾರ ಎದುರಿಸುತ್ತಿದೆ. ಗೋಲ್‍ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆಯನ್ನು ಮುಂದಕ್ಕೆ ತಂದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಅವರ ಪಕ್ಷದಲ್ಲೇ ಅದಕ್ಕೆ ವಿರೋಧ ಇದೆ. ಒಂದು ಕಡೆ ಡಿ.ಕೆ.ಶಿವಕುಮಾರ್, ಇನ್ನೊಂದು ಕಡೆ ಶಾಮನೂರು ಶಿವಶಂಕರಪ್ಪ ಅವರೂ ವಿರೋಧ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕಾಂತರಾಜ್ ವರದಿಯಲ್ಲಿ ಏನಿದೆಯೋ ಅದನ್ನೇ ಜಯಪ್ರಕಾಶ್ ಹೆಗ್ಡೆಯವರೂ ಕೊಟ್ಟಿದ್ದಾರೆ. ಅಂದಮೇಲೆ ಕಳೆದ ಹಲವು ವರ್ಷಗಳಲ್ಲಿ ಏನು ಬದಲಾವಣೆ ಆಗಿದೆ? ವಾಸ್ತವವಾಗಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಈಗ ಸುಮಾರು 1.50 ಕೋಟಿ ಇದ್ದರೂ ಅದನ್ನು ಒಂದು ಕೋಟಿ ಎಂಟು ಲಕ್ಷ ಎಂದೇ ತೋರಿಸಿದ್ದಾರೆ ಎಂದು ಟೀಕಿಸಿದರು.

ಸರಿಯಾದ ಅಂಕಿಅಂಶ ಇಲ್ಲ; ಮುಂದಿನ ಏಪ್ರಿಲ್, ಮೇ ತಿಂಗಳಿನಲ್ಲಿ ಜನಗಣತಿ ನಡೆಯಲಿದೆ. ಆಗ ಸರಿಯಾದ ಅಂಕಿಅಂಶ ಸಿಗಲಿದೆ ಎಂದ ಅವರು, ಇವರು ಮಾಡಿರುವುದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯೇ ಹೊರತು ಜಾತಿ ಗಣತಿ ಅಲ್ಲ ಎಂದು ವಿಶ್ಲೇಷಿಸಿದರು. ಇದಕ್ಕೆ ನಮ್ಮ ವಿರೋಧ ಇಲ್ಲ; ಎಲ್ಲವನ್ನೂ ಗಣನೆಗೆ ತೆಗೆದುಕೊಂಡು, ತಾರತಮ್ಯ ಮಾಡದೆ ಇದ್ದರೆ ಇದನ್ನು ಒಪ್ಪಬಹುದು ಎಂದು ಹೇಳಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಅನುಷ್ಠಾನ ಮಾಡುವುದಾದರೆ ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಂಡು ಜನರಿಗೆ ಉಪಯುಕ್ತ ಆಗಿದ್ದರೆ, ಚರ್ಚೆ ಮಾಡಬೇಕಿದೆ. ಆದರೆ, ಸೋರಿಕೆ ಮಾಡಿ ಚರ್ಚೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಸರಕಾರದ ವಿರುದ್ಧ ಶೇ.60 ಕಮಿಷನ್ ಸಂಬಂಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಪತ್ರವನ್ನೂ ಬರೆಯುತ್ತಿದ್ದಾರೆ. ಇವುಗಳಿಗೆ ಸರಕಾರದ ಬಳಿ ಉತ್ತರವಿಲ್ಲ; ಆದ್ದರಿಂದ ಗೋಲ್‍ಪೋಸ್ಟ್ ಬದಲಿಸಲು ಇಂಥವುಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಗಾಜಿನಮನೆಯಲ್ಲಿದೆ. ಪದೇಪದೇ ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮೇಲೆ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾರೆ. ಯಾರು ಏನು ಬೇಕಾದರೂ ಮಾಡಬಹುದೆಂಬ ಪರಿಸ್ಥಿತಿ ಕಾಂಗ್ರೆಸ್ಸಿನದು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಭ್ರಷ್ಟಾಚಾರದ ಅನೇಕ ಹಗರಣಗಳು, ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಕಾಂಗ್ರೆಸ್ ಪಕ್ಷವು ಹತ್ತಾರು ಸಮಸ್ಯೆಗಳಲ್ಲಿದೆ; ಅದಕ್ಕಾಗಿಯೇ ಬೇರೆ ಬೇರೆ ವಿಷಯಗಳ ಮೂಲಕ ಗೋಲ್‍ಪೋಸ್ಟ್ ಬದಲಿಸುತ್ತಿದ್ದಾರೆ ಎಂದು ತಿಳಿಸಿದರು.

BREAKING: ಬೆಂಗಳೂರಲ್ಲಿ ವಿದ್ಯುತ್ ಸಂಪರ್ಕ ನೀಡಲು 3 ಲಕ್ಷ ಲಂಚ: ‘ಬೆಸ್ಕಾಂ ಎಇ’ ಲೋಕಾಯುಕ್ತ ಬಲೆಗೆ

BREAKING: ರಾಜ್ಯ ಸರ್ಕಾರದಿಂದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿನ ಬೋಧಕರ ಖಾಲಿ ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್

ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

Share. Facebook Twitter LinkedIn WhatsApp Email

Related Posts

‘ನೈಜ ಪ್ರೇಮಿ ಯಾವತ್ತೂ ವಿಕೃತನಾಗಲ್ಲ’ : ಪ್ರೇಯಸಿ ಜತೆಗಿನ ಖಾಸಗಿ ಕ್ಷಣ ಸೆರೆಹಿಡಿದವನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

06/02/2026 12:13 PM1 Min Read

BIG NEWS : ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ 100ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗಾಹುತಿ

06/02/2026 11:43 AM1 Min Read

Shakuna Shastra: ಈ 4 ಪಕ್ಷಿಗಳು ನಿಮ್ಮ ಮನೆಯ ಮೇಲೆ ಕುಳಿತಿವೆಯೇ? ಅದು ನಿಮ್ಮ ಪೂರ್ವಜರ ಕೋಪದ ಸಂಕೇತವಾಗಿರಬಹುದು!

06/02/2026 11:40 AM1 Min Read
Recent News

‘ನೈಜ ಪ್ರೇಮಿ ಯಾವತ್ತೂ ವಿಕೃತನಾಗಲ್ಲ’ : ಪ್ರೇಯಸಿ ಜತೆಗಿನ ಖಾಸಗಿ ಕ್ಷಣ ಸೆರೆಹಿಡಿದವನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

06/02/2026 12:13 PM

BREAKING: ಬಿಹಾರ ಚುನಾವಣೆ ರದ್ದು ಕೋರಿದ್ದ ಜನ್ ಸುರಾಜ್‌ಗೆ ಸುಪ್ರೀಂಕೋರ್ಟ್ ಚಾಟಿ: ಅರ್ಜಿದಾರರ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡಾಮಂಡಲ!

06/02/2026 12:02 PM

BIG NEWS : ಟಿಕೆಟ್ ಖರೀದಿಸಿದ ಸ್ಥಳದಿಂದಲೇ ಬೋರ್ಡಿಂಗ್ : ರೈಲ್ವೆ ನಿಯಮಗಳಲ್ಲಿ ಮಹತ್ವದ ಬದಲಾವಣೆ.!

06/02/2026 11:55 AM

ಕೇಬಲ್ ಟಿವಿಗೆ ಅಂತ್ಯ ಹಾಡಲಿದೆ ಜಿಯೋ : 1000+ ಲೈವ್ ಟಿವಿ ಚಾನೆಲ್ ಗಳು, 10+ OTT ಆಪ್, 100 Mbps ಡೇಟಾ.!

06/02/2026 11:49 AM
State News
KARNATAKA

‘ನೈಜ ಪ್ರೇಮಿ ಯಾವತ್ತೂ ವಿಕೃತನಾಗಲ್ಲ’ : ಪ್ರೇಯಸಿ ಜತೆಗಿನ ಖಾಸಗಿ ಕ್ಷಣ ಸೆರೆಹಿಡಿದವನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

By kannadanewsnow0506/02/2026 12:13 PM KARNATAKA 1 Min Read

ಬೆಂಗಳೂರು : ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಪ್ರೇಯಸಿಯ ಜೊತೆಗಿನ ಖಾಸಗಿ ಕ್ಷಣಗಳನ್ನು ಸೆರೆಹಿಡಿದ ಯುವಕನಿಗೆ ಇದೀಗ ಹೈಕೋರ್ಟ್ ಜಾಮೀನು…

BIG NEWS : ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ 100ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗಾಹುತಿ

06/02/2026 11:43 AM

Shakuna Shastra: ಈ 4 ಪಕ್ಷಿಗಳು ನಿಮ್ಮ ಮನೆಯ ಮೇಲೆ ಕುಳಿತಿವೆಯೇ? ಅದು ನಿಮ್ಮ ಪೂರ್ವಜರ ಕೋಪದ ಸಂಕೇತವಾಗಿರಬಹುದು!

06/02/2026 11:40 AM

ALERT : ಪ್ರತಿದಿನ `ಎನರ್ಜಿ ಡ್ರಿಂಕ್ಸ್’ ಕುಡಿಯುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳು ಬರಬಹುದು.!

06/02/2026 11:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.