Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕದ ನೌಕಾ ದಿಗ್ಬಂಧನವೇ ಶಾಂತಿ ಮಾತುಕತೆಗೆ ಅಡ್ಡಿ: ಅಧ್ಯಕ್ಷ ಟ್ರಂಪ್‌ಗೆ ಪಾಕ್ ಸೇನಾ ಮುಖ್ಯಸ್ಥ ಆಸಿಂ ಮುನಿರ್ ಕಿವಿಮಾತು!

20/04/2026 6:50 PM

ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್‌ನಲ್ಲಿ ಅಲ್ಪ ಸಮಾಧಾನ: ಸಿಬಿಐ ನಿಲುವಿಗೆ ಪ್ರತ್ಯುತ್ತರ ನೀಡಲು ನ್ಯಾಯಾಲಯ ಅನುಮತಿ

20/04/2026 6:47 PM

ಮೆಟಾದಲ್ಲಿ ಮತ್ತೆ ಉದ್ಯೋಗ ಕಡಿತದ ಭೀತಿ: 30 ದಿನಗಳಲ್ಲಿ 8,000 ನೌಕರರು ಮನೆಗೆ?

20/04/2026 6:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ಸವ: ದೇವಸ್ಥಾನ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಆಹ್ವಾನ
KARNATAKA

ಸಾಗರ ಶ್ರೀ ಮಹಾಗಣಪತಿ ಜಾತ್ರಾ ಮಹೋತ್ಸವ: ದೇವಸ್ಥಾನ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು ಆಹ್ವಾನ

By kannadanewsnow0921/03/2026 7:06 PM

ಶಿವಮೊಗ್ಗ: ಜಿಲ್ಲೆಯ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂಭ್ರಮ ಆರಂಭವಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಶನಿವಾರ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಗರದ ಉಪವಿಭಾಗಾಧಿಕಾರಿ (AC) ವೀರೇಶ್ ಕುಮಾರ್, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಟಿ.ವಿ. ಪಾಂಡುರಂಗ ಹಾಗೂ ಸಮಿತಿಯ ಸದಸ್ಯ ಐವಿ ಹೆಗಡೆ ಅವರು ಶಾಸಕರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ಪ್ರಮೀಳಾ ಕುಮಾರಿ, ಉಪ ತಹಶೀಲ್ದಾರ್ ತೋಯಜಾಕ್ಷಿ ಉಪಸ್ಥಿತರಿದ್ದರು.

ಸಾಗರದ ಈ ಗಣಪತಿ ಜಾತ್ರೆಯು ಅತ್ಯಂತ ಪುರಾತನ ಹಾಗೂ ಜನಪ್ರಿಯವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ವಿ ನಿರ್ವಹಣೆ ಮತ್ತು ಅಗತ್ಯ ಸಿದ್ಧತೆಗಳ ಕುರಿತು ಕೂಡ ಇದೇ ವೇಳೆ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ಮಾರ್ಚ್ 22ಕ್ಕೆ ಮಹಾರಥೋತ್ಸವದ ಸಂಭ್ರಮ

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ‘ಪರಾಭವ’ ನಾಮ ಸಂವತ್ಸರದ ಜಾತ್ರಾ ಮಹೋತ್ಸವ ಮತ್ತು ಉತ್ಸವಗಳು ಸಡಗರದಿಂದ ಆರಂಭವಾಗಿವೆ. ಮಾರ್ಚ್ 19ರಿಂದ ಪ್ರಾರಂಭವಾಗಿರುವ ಈ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 25ರವರೆಗೆ ವಿವಿಧ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯಲಿವೆ.

ಉತ್ಸವಗಳ ವಿವರ ಮತ್ತು ಪ್ರಮುಖ ದಿನಾಂಕಗಳು:

ಸಕಲ ಲೋಕದ ಸುಭಿಕ್ಷೆಗಾಗಿ ಶ್ರೀ ಮಹಾಗಣಪತಿ ದೇವರು ಯಾಗದೀಕ್ಷೆಯನ್ನು ಸ್ವೀಕರಿಸಿದ್ದು, ಹಗಲು-ರಾತ್ರಿ ನಿರಂತರ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

  • ಮಾರ್ಚ್ 21 (ಇಂದು): ಚೈತ್ರ ಶುದ್ಧ ತದಿಗೆಯ ಅಂಗವಾಗಿ ‘ಪುಷ್ಪಮಂಜರಿ ಯಂತ್ರೋತ್ಸವ’ ಜರುಗಿತು.

  • ಮಾರ್ಚ್ 22 (ನಾಳೆ): ಜಾತ್ರೆಯ ಪ್ರಮುಖ ಆಕರ್ಷಣೆಯಾದ ಶ್ರೀ ಮಹಾಗಣಪತಿ ದೇವರ ಮಹಾಸ್ಪಂದನ ರಥೋತ್ಸವ ನಡೆಯಲಿದೆ. ಬೆಳಿಗ್ಗೆ 8:00 ರಿಂದ 8:15ರ ಒಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ರಥಾರೋಹಣ ಕಾರ್ಯಕ್ರಮ ಜರುಗಲಿದೆ.

  • ಮಾರ್ಚ್ 23: ಚೈತ್ರ ಶುದ್ಧ ಪಂಚಮಿಯಂದು ಕುಂಕುಮೋತ್ಸವ, ಅವಭೃತ ಮತ್ತು ಅಂಕುರಾರ್ಪಣೆ ನಡೆಯಲಿದೆ.

  • ಮಾರ್ಚ್ 24: ದೇವಸ್ಥಾನದಲ್ಲಿ ವಿಶೇಷ ಗಣಪತಿ ಹವನ ಆಯೋಜಿಸಲಾಗಿದೆ.

  • ಮಾರ್ಚ್ 25: ಜಾತ್ರಾ ಮಹೋತ್ಸವದ ಸಮಾರೋಪ ಅಂಗವಾಗಿ ಮಧ್ಯಾಹ್ನ 12:00 ಗಂಟೆಗೆ ಸಾರ್ವತ್ರಿಕ ಗಣಹೋಮದ ಪೂರ್ಣಾಹುತಿ ನೆರವೇರಲಿದೆ.

ಈಗಾಗಲೇ ಧ್ವಜಾರೋಹಣ, ಅಂಕುರಾರ್ಪಣೆ ಮತ್ತು ಮೂಷಿಕ ಯಂತ್ರೋತ್ಸವಗಳು ಯಶಸ್ವಿಯಾಗಿ ನೆರವೇರಿವೆ. ದೇವಸ್ಥಾನ ಸಮಿತಿಯು ಭಕ್ತಾದಿಗಳಿಗೆ ಕುಟುಂಬ ಸಮೇತ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುವಂತೆ ಕೋರಿದೆ. ರಥೋತ್ಸವದ ಹಿನ್ನೆಲೆಯಲ್ಲಿ ಸಾಗರ ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಹೃದಯಭಾಗದಲ್ಲಿ ಕುಂಬ್ಳೆ ‘ಕನಸಿನ ಅರಮನೆ’: ಐಷಾರಾಮಿ ಮನೆಯ ವಿಶೇಷತೆಗಳು ಇಲ್ಲಿವೆ

20/04/2026 6:40 PM2 Mins Read

ರಾಜ್ಯದ 14 ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮುಂದಿನ 4 ದಿನ ಭಾರೀ ಮಳೆ, ‘ಯೆಲ್ಲೋ ಅಲರ್ಟ್’ ಘೋಷಣೆ!

20/04/2026 6:28 PM1 Min Read

ರಾಜ್ಯ ಸರ್ಕಾರಿ ನೌಕರರ ಸಂಬಳ ವಿಳಂಬದ ಹಿಂದೆ ಅಡಗಿದೆಯೇ ಗೃಹಲಕ್ಷ್ಮಿ ಯೋಜನೆಯ ಎಫೆಕ್ಟ್?

20/04/2026 6:24 PM2 Mins Read
Recent News

ಅಮೆರಿಕದ ನೌಕಾ ದಿಗ್ಬಂಧನವೇ ಶಾಂತಿ ಮಾತುಕತೆಗೆ ಅಡ್ಡಿ: ಅಧ್ಯಕ್ಷ ಟ್ರಂಪ್‌ಗೆ ಪಾಕ್ ಸೇನಾ ಮುಖ್ಯಸ್ಥ ಆಸಿಂ ಮುನಿರ್ ಕಿವಿಮಾತು!

20/04/2026 6:50 PM

ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್‌ನಲ್ಲಿ ಅಲ್ಪ ಸಮಾಧಾನ: ಸಿಬಿಐ ನಿಲುವಿಗೆ ಪ್ರತ್ಯುತ್ತರ ನೀಡಲು ನ್ಯಾಯಾಲಯ ಅನುಮತಿ

20/04/2026 6:47 PM

ಮೆಟಾದಲ್ಲಿ ಮತ್ತೆ ಉದ್ಯೋಗ ಕಡಿತದ ಭೀತಿ: 30 ದಿನಗಳಲ್ಲಿ 8,000 ನೌಕರರು ಮನೆಗೆ?

20/04/2026 6:45 PM

ಪೋಸ್ಟ್ ಆಫೀಸ್‌ನಲ್ಲಿ ₹7 ಲಕ್ಷ ಹೂಡಿಕೆ ಮಾಡಿ, ₹3 ಲಕ್ಷ ಬಡ್ಡಿ ಪಡೆಯಿರಿ! ಸುರಕ್ಷಿತ ಹೂಡಿಕೆಗೆ ಇಲ್ಲಿದೆ ಸೂಕ್ತ ಯೋಜನೆ

20/04/2026 6:42 PM
State News
KARNATAKA

ಬೆಂಗಳೂರಿನ ಹೃದಯಭಾಗದಲ್ಲಿ ಕುಂಬ್ಳೆ ‘ಕನಸಿನ ಅರಮನೆ’: ಐಷಾರಾಮಿ ಮನೆಯ ವಿಶೇಷತೆಗಳು ಇಲ್ಲಿವೆ

By kannadanewsnow0920/04/2026 6:40 PM KARNATAKA 2 Mins Read

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಅಪ್ರತಿಮ ಮ್ಯಾಚ್ ವಿನ್ನರ್, ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ದಾಖಲೆ ಬರೆದ ಅನಿಲ್ ಕುಂಬ್ಳೆ…

ರಾಜ್ಯದ 14 ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮುಂದಿನ 4 ದಿನ ಭಾರೀ ಮಳೆ, ‘ಯೆಲ್ಲೋ ಅಲರ್ಟ್’ ಘೋಷಣೆ!

20/04/2026 6:28 PM

ರಾಜ್ಯ ಸರ್ಕಾರಿ ನೌಕರರ ಸಂಬಳ ವಿಳಂಬದ ಹಿಂದೆ ಅಡಗಿದೆಯೇ ಗೃಹಲಕ್ಷ್ಮಿ ಯೋಜನೆಯ ಎಫೆಕ್ಟ್?

20/04/2026 6:24 PM

BREAKING : ಕಲ್ಬುರ್ಗಿಯಲ್ಲಿ ಹಾಡ ಹಗಲೇ ಗುಂಡಿನ ಸದ್ದು : ವ್ಯಕ್ತಿ ಮೇಲೆ ಗುಂಡು ಹಾರಿಸಿ, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!

20/04/2026 5:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.