ಮೈಸೂರು: ಅಧಿಕಾರಿಗಳು ಬಾಡಿಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರು ಮಚ್ಚು ಹಿಡಿದು ಸರ್ಕಾರಿ ಅಧಿಕಾರಿಗಳಿಗೆ ಹಲ್ಲೆ ಮಾಡಲು ಮುಂದಾಗಿದ್ದು ಮಚ್ಚು ತೋರಿಸಿ ಬೆದರಿಸಿದ ಮಹಿಳೆ ಹಾಗೂ ಆಕೆ ಪತಿ ಇಬ್ಬರು ಈಗ ಜೈಲು ಸೇರಿದ್ದಾರೆ.
BIGG NEWS: ಉತ್ತರಕನ್ನಡ ಜಿಲ್ಲೆಯಲ್ಲಿ ಜಾನುವಾರು ಚರ್ಮಗಂಟು ರೋಗ; ಡಿ.18 ವರೆಗೆ ಜಾನುವಾರು ಮಾರಾಟ ನಿಷೇಧ
ಕಾಂಗ್ರೆಸ್ ಮುಖಂಡ ಶಫಿ ಪತ್ನಿ ಸಯ್ಯದ್ ಮೈಬುನಿಸಾ ಅವರನ್ನು ಮೈಸೂರಿನ ಪೊಲೀಸರು ಕೊಡಗಿನ ವಿರಾಜಪೇಟೆಯಲ್ಲಿ ಬಂಧಿಸಿದ್ದಾರೆ. ಜೊತೆಗೆ ರೌಡಿಶೀಟರ್ ಕೇಸ್ ದಾಖಲಿಸಿದ್ದಾರೆ.ಮೈಸೂರಿನ ಸಾತಗಳ್ಳಿಯ ಬಸ್ ಡಿಪೋ ಬಳಿ ಅಧಿಕಾರಿಗಳ ವಿರುದ್ಧ ಮಹಿಳೆ ಕೂಗಾಡಿದ್ದರು. ಅಧಿಕಾರಿಗಳು ಬಾಕಿ ಇದ್ದ ಬಾಡಿಗೆ ಹಣ ಕಟ್ಟುವಂತೆ ನೋಟಿಸ್ ನೀಡಿದ್ದಕ್ಕೆ ಅವರ ವಿರುದ್ಧ ಕೂಗಾಡಿದ್ದಲ್ಲದೇ ಮಚ್ಚು ತೋರಿಸಿ ಬೆದರಿಕೆ ಕೂಡ ಹಾಕಿದ್ದರು.
BIGG NEWS: ಉತ್ತರಕನ್ನಡ ಜಿಲ್ಲೆಯಲ್ಲಿ ಜಾನುವಾರು ಚರ್ಮಗಂಟು ರೋಗ; ಡಿ.18 ವರೆಗೆ ಜಾನುವಾರು ಮಾರಾಟ ನಿಷೇಧ
ಕಾಂಗ್ರೆಸ್ ಮುಖಂಡ ಶಫೀ ಅಹಮದ್ ಸಾತಗಳ್ಳಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಸ್ಥಳವನ್ನ 12 ವರ್ಷಗಳ ಅವಧಿಗೆ ಪರವಾನಗಿ ನೀಡಿ ಕರಾರು ಒಪ್ಪಂದ ಮಾಡಿಕೊಂಡಿದ್ದ. ಬಾಡಿಗೆ ಪಡೆದ ಮಳಿಗೆಗಳನ್ನ 6 ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದ. ಅವರಿಂದ ಪ್ರತಿ ತಿಂಗಳು ತಪ್ಪದೆ ಬಾಡಿಗೆ ಪಡೆದಿದ್ದಾನೆ. ಆದರೆ ಶಫೀಕ್ ಅಹಮದ್ ಬಾಡಿಗೆಯನ್ನ ಸಾರಿಗೆ ಇಲಾಖೆಗೆ ಸರಿಯಾಗಿ ಪಾವತಿ ಮಾಡಿಲ್ಲ.