ಬೆಂಗಳೂರು: ಇತ್ತೀಚೆಗೆ ಸಂಪಂಗಿ ರಾಮನಗರದಲ್ಲಿ ತಾಯಿಯೊಬ್ಬಳು ನಾಲ್ಕನೇ ಮಹಡಿಯ ಮೇಲಿಂದ ಮಗುವನ್ನು ಎಸೆದ ಪ್ರಕರಣಕ್ಕೆ ರಾಮನಗರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಅಗಸ್ಟ್ನಲ್ಲಿ ಹೆತ್ತ ತಾಯಿಯೇ ತನ್ನ ಮಗುವನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ್ದ ಘಟನೆ ಸಂಪಂಗಿ ರಾಮನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಮಗುವಿನ ತಾಯಿ ಸುಷ್ಮಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಈಕೆ ವೃತ್ತಿಯಲ್ಲಿ ಡೆಂಟಲ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಸುಷ್ಮಾ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿದ್ದರೆ ಲೈಫ್ ಎಂಜಾಯ್ ಮಾಡಲಾಗುವುದಿಲ್ಲ ಎಂದು ಮಗುವನ್ನು ಕೊಲೆ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 193 ಪುಟಗಳ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.