ದೆಹಲಿ: ಕ್ಯಾಲಿಕಟ್ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಕ್ಯಾಬಿನ್ನಲ್ಲಿ ಸುಡುವ ವಾಸನೆ ಕಂಡುಬಂದ ಕಾರಣ ಶನಿವಾರ ರಾತ್ರಿ ಮಸ್ಕತ್ಗೆ ವಾಪಸ್ ಕಳುಹಿಸಲಾಗಿದೆ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ವಿಮಾನದ ಗಾಲಿಯಲ್ಲಿದ್ದ ವೆಂಟ್ ಒಂದರಿಂದ ಸುಡುವ ವಾಸನೆ ಬರುತ್ತಿತ್ತು. ಈ ಕಾರಣದಿಂದ ಪೈಲಟ್ಗಳು ವಿಮಾನವನ್ನು ಮಸ್ಕತ್ಗೆ ತಿರುಗಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Air India Express aircraft VT-AXX operating flight IX-355 (Calicut-Dubai) diverted to Muscat as during Cruise, a burning smell emitted from one of the vents in the forward galley: DGCA
— ANI (@ANI) July 17, 2022
ಮತ್ತೊಂದು ಘಟನೆಯಲ್ಲಿ, ಇಂಡಿಗೋದ ಶಾರ್ಜಾ-ಹೈದರಾಬಾದ್ ವಿಮಾನವನ್ನು ಪೈಲಟ್ಗಳು ಇಂಜಿನ್ನಲ್ಲಿ ದೋಷವನ್ನು ಗಮನಿಸಿದ ನಂತರ ಮುಂಜಾಗ್ರತಾ ಕ್ರಮವಾಗಿ ಇಂದು ಪಾಕ್ನ ಕರಾಚಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
BIGG NEWS : 40% ಸರ್ಕಾರದ ಮತ್ತೊಬ್ಬ ಸಚಿವರ ವಿರುದ್ಧ ಪ್ರಧಾನಿಗೆ ಮತ್ತೊಂದು ಪತ್ರ : ಕಾಂಗ್ರೆಸ್ ಟ್ವೀಟ್
Big news: ಕೇವಲ 18 ತಿಂಗಳಲ್ಲಿ 2 ಬಿಲಿಯನ್ ಕೋವಿಡ್ ಲಸಿಕೆ ವಿತರಿಸಿ ಹೊಸ ದಾಖಲೆ ನಿರ್ಮಿಸಿದ ಭಾರತ!