ಬೆಂಗಳೂರು : ನೀಟ್ ಪರೀಕ್ಷೆ, ಕೇಂದ್ರದ ಲೋಕಸಬೇ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಒಂದು ದೇಶ ಒಂದು ಚುನಾವಣೆ ಪ್ರಸ್ತಾವನೆಗಳನ್ನು ವಿರೋಧಿಸಿ ವಿಧಾನಮಂಡಲದಲ್ಲಿ ನಿರ್ಣಯ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀಟ್ ಪರೀಕ್ಷೆ, ಒನ್ ನೇಷನ್ ಒನ್ ಎಲೆಕ್ಷನ್, ಲೋಕಸಬೇ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯಂತಹ ನೀತಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಕೇಂದ್ರದ ಈ ಮೂರು ನೀತಿಗಳ ವಿರುದ್ಧ ನಿರ್ಣಯ ಮಂಡನೆ
ಒಂದು ದೇಶ ಒಂದು ಚುನಾಣೆ ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ವಿರುದ್ಧ. ಹೀಗಾಗಿ ಅದನ್ನು ಮಾಡಬಾರದು.
ನೀಟ್ ರದ್ದುಪಡಿಸಬೇಕು. ಹಿಂದೆ ಇದ್ದಂತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಸೀಟು ಹಂಚಿಕೆಗೆ ಅವಕಾಶ ಕೊಡಬೇಕು.
2026 ರಲ್ಲಿ ವಿಧಾನಸಭೆ, ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಬೇಡ, ಇದರಿಂದ ಶಾಸಕರ ಸಂಖ್ಯೆ ಕುಸಿಯುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಗಿದೆ.