ಬೆಂಗಳೂರು : ಜಲ ಸಂಪನ್ಮೂಲ ನಿರ್ವಹಣೆಯನ್ನು ಸಮರ್ಪಕವಾಗಿ ಬಲಪಡಿಸಲು ಅಂತರ್-ವಿಭಾಗೀಯ ರಾಜ್ಯ ಜಲಸಂಪನ್ಮೂಲ ಪ್ರಾದಿಕಾರವನ್ನು ರಚಿಸಲು ಇಂದು ಸಚಿವ ಸಂಪುಟದಲ್ಲಿ ಅನುಮೋದನೆಯಾದ ಹೊಸ ಜಲ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಜಲ ನೀತಿಯ ಮಾರ್ಗದರ್ಶನ, ಸಮನ್ವಯ ಮತ್ತು ನೀತಿಯ ಅನುಷ್ಠಾನದ ಕಾರ್ಯದಕ್ಷತೆಯ ವಿಮರ್ಶೆಯನ್ನು ಒದಗಿಸುವ ಕುರಿತು, ಜಲ ಸಂಪನ್ಮೂಲ ನಿರ್ವಹಣೆಯನ್ನು ಬಲಪಡಿಸಲು ವಿಧಾನಗಳ ನೀತಿ ಮತ್ತು ಸಾಂಸ್ಥಿಕ ಮೌಲ್ಯ ಮಾಪನಗಳನ್ನು ಸಕ್ರಿಯಗೊಳಿಸುವುದು, ನೀರು ಬಳಕೆದಾರರ ಸಂಘಗಳ ಮತ್ತು ಸಂಸ್ಥೆಗಳಾದ ನೀರಿನ ಬಳಕೆದಾರರ ಸಂಘ, ನೀರಿನ ಬಳಕೆದಾರರ ಮಹಾ ಮಂಡಳಿ, ಕೆರೆ ನೀರು ಬಳಕೆದಾರರ ಸಂಘ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ಜಲಾನಯನ ಸಮಿತಿಗಳನ್ನು ಬಲಪಡಿಸಲು ನಿಯಮಿತವಾಗಿ ಸಭೆಗಳನ್ನು ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಜಲ ನೀತಿ ಸಮಿತಿಯನ್ನು ರಚಿಸಲಾಗುವುದು.
ನೀರಿನ ಬಳಕೆಯ ದಕ್ಷತೆ ಮತ್ತು ನೀರಿನ ಉತ್ಪಾದಕತೆಯನ್ನು ಸುಧಾರಿಸುವುದು, ನೀರಾವರಿ ಯೋಜನೆಗಳ ನಿರ್ವಹಣೆ, ನೀರಾವರಿ ಆಧುನೀಕರಣ ಮತ್ತು ಕಾಲುವೆ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ (ಕೃಷಿ /ತೋಟಗಾರಿಕೆ /ಬೃಹತ್ ನೀರಾವರಿ ಯೋಜನೆಗಳು), ಕರ್ನಾಟಕ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ (ಕೆಡಬ್ಲ್ಯು ಆರ್ಐಎಸ್), ನದಿ ಕಣಿವೆ ಯೋಜನೆ ಮತ್ತು ನಿರ್ವಹಣೆ, ಕೆರೆ ತುಂಬಿಸಲು, ಅಂತರ್ಜಲ ಮರುಪೂರಣ, ಕೃಷಿ ಇತ್ಯಾದಿಗಳಿಗೆ ನಗರ ತ್ಯಾಜ್ಯ ನೀರಿನ ಸಂಸ್ಕರಣೆ ಕಡಿಮೆ ನೀರು ಬಳಕೆಯ ಬೆಳೆಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸುವುದು, ಜಲಮೂಲಗಳ, ಜಲಾನಯನ ಪ್ರದೇಶಗಳ ಸುಧಾರಣೆ. ನೀರಿನ ನಿರ್ವಹಣೆಯಲ್ಲಿ ರೈತರು/ಬಳಕೆದಾರರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮುಂತಾದವು ಜಲ ನೀತಿಯನ್ನು ಬಲಪಡಿಸುವ ಅಥವಾ ಜಲ ನೀತಿಯಲ್ಲಿನ ಹೊಸ ಅಂಶಗಳಾಗಿರುತ್ತವೆ.
BIGG NEWS : ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ : ಕಾಂಗ್ರೆಸ್ ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ವಿವಿಧ ಬೆಳೆಗಳ ನೀರಿನ ಉತ್ಪಾದಕತೆಯನ್ನು ಹೆಚ್ಚಿಸುವುದು, ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವುದು, ಜಲ್ ಜೀವನ್ ಮಿಷನ್ ಅಡಿಯಲ್ಲಿ ಅಂತರ ವಲಯದ ನೀರಿನ ಸಂಪನ್ಮೂಲಗಳನ್ನು ಸಮಗ್ರವಾಗಿ ಪರಿಹರಿಸುವ ಮೂಲಕ ಪ್ರತಿ ಮನೆಗೆ 24 x 7 ಕುಡಿಯುವ ನೀರಿನ ಸರಬರಾಜು, ಅಟಲ್ ಭುಜಲ್ ಯೋಜನೆಯಡಿ ಅಂತರ್ಜಲ ನಿರ್ವಹಣೆ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು, ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆಯಿಂದ ರಾಜ್ಯದಲ್ಲಿ ಹೆಚ್ಚಿನ ಜನ ಸಂಖ್ಯೆಗೆ ನೀರನ್ನು ಒದಗಿಸುವುದು ಹೊಸ ಜಲ ನೀತಿ 2021 ರ ಉದ್ದೇಶವಾಗಿರುತ್ತದೆ.
ಸಚಿವ ಸಂಪುಟದ ಉಪಸಮಿತಿಯ ಎರಡನೇ ಸಭೆಯನ್ನು ದಿನಾಂಕ:27.04.2022ರಂದು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಡು ರಾಜ್ಯ ಜಲ ನೀತಿಯನ್ನು ಮಂಡಿಸಲಾಯಿತು. ಕರಡು ರಾಜ್ಯ ಜಲ ನೀತಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಲು ಶಿಫಾರಸ್ಸು ಮಾಡಲಾಗಿತ್ತು.
ಆರ್ಥಿಕ ಬೆಳವಣಿಗೆಯಿಂದ ಮತ್ತು ಕರ್ನಾಟಕದಲ್ಲಿ ಕೈಗಾರಿಕೆ ಮತ್ತು ನಗರ ನೀರು ಸರಬರಾಜು ವಲಯಗಳಲ್ಲಿನ ಬೇಡಿಕೆಗಳು ಹೆಚ್ಚುತ್ತಿರುವುದರಿಂದ ನೀರಿನ ಬಳಕೆಯ ದಕ್ಷತೆಯನ್ನು, ಉತ್ಪಾದಕತೆಯನ್ನು ಸುಧಾರಿಸುವ, ನೀರಿನ ಗುಣಮಟ್ಟ ಮತ್ತು ನೀರಿನ ಮರುಬಳಕೆಯ ಬಗ್ಗೆ ಗಮನ ಹರಿಸುವ ಅವಶ್ಯಕತೆಯಿದೆ.
ಕುಡಿಯುವ ನೀರು, ಆರೋಗ್ಯ, ಆಹಾರ, ಇಂಧನ, ಪರಿಸರ ಮತ್ತು ಇತರೆ ಸಾಮಾಜಿಕ ಉದ್ದೇಶಗಳಿಗಾಗಿ ರಾಜ್ಯದ ಜಲ ಸಂಪನ್ಮೂಲಗಳ ಸುರಕ್ಷತೆ ಮತ್ತು ಉತ್ತಮ ಬಳಕೆಯನ್ನು ಸುಲಭಗೊಳಿಸುವುದು ಜಲ ನೀತಿ 2021 ರ ಗುರಿಯಾಗಿರುತ್ತದೆ.
BIGG NEWS: ಮಕ್ಕಳ ಕೈಯಿಂದ ರಾಕಿ ತೆಗೆಸಿದ್ದ ʻ ಮಂಗಳೂರಿನ ಶಾಲಾ ಶಿಕ್ಷಕಿ ʼ : ಶಾಲೆಗೆ ʼ ಮುತ್ತಿಗೆ ಹಾಕಿದ ಪೋಷಕರು ʼ