ಬೆಂಗಳೂರು: ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ NABARD Infrastructure Development Assistance (NIDA) ನ ನೆರವಿನಿಂದ ವಿಜಯಪುರ ಜಿಲ್ಲೆಯ, ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ಗ್ರಾಮೀಣ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರೆ 4 ನಗರ ಸ್ಥಳೀಯ ಸಂಸ್ಥೆಗಳಾದ ಚಡಚಣ್, ಮನಗೂಲಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-1) ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಪರಿಷ್ಕೃತ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
BIGG NEWS: ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಟೆಂಡರ್- ಬಿ.ವೈ.ರಾಘವೇಂದ್ರ
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಲ ಜೀವನ್ ಮಿಷನ್ ನಿಧಿ ಅಡಿಯಲ್ಲಿ ವಿಜಯಪುರ ಜಿಲ್ಲೆಯ, ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ಗ್ರಾಮೀಣ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರೆ 4 ನಗರ ಸ್ಥಳೀಯ ಸಂಸ್ಥೆಗಳಾದ ಚಡಚಣ್, ಮನಗೂಲಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-1) ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ PSRನ್ನು ತಯಾರಿಸಿ ದಿನಾಂಕ:03-08-2020ರಂದು ನಡೆದ ರಾಜ್ಯಮಟ್ಟದ ಯೋಜನಾ ಅನುಮೋದನಾ ಸಮಿತಿ ಸಭೆಯಲ್ಲಿ (SLSSC) ತಾತ್ವಿಕ ಅನುಮೋದನೆ ಪಡೆಯಲಾಗಿದ್ದು, ಅದರಂತೆ, ದಿನಾಂಕ:19-10-2020ರಂದು ನಡೆದ ರಾಜ್ಯ ತಾಂತ್ರಿಕ ಸಮಿತಿ (STA) ಸಭೆಯಲ್ಲಿ ಮಂಡಿಸಿ ತಾಂತ್ರಿಕವಾಗಿ ಅನುಮೋದನೆ ಪಡೆಯಲಾಗಿತ್ತು ಎಂದು ಹೇಳಿದ್ದಾರೆ.
BIGG NEWS : ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ : ಕಾಂಗ್ರೆಸ್ ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಆಲಮಟ್ಟಿ ಜಲಾಶಯದ ಎಡದಂಡೆಯಲ್ಲಿ ಈ ಯೋಜನೆಗೆ ನೀರು ಎತ್ತುವಳಿಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಗಾಗಿ ಆಲಮಟ್ಟಿ ಜಲಾಶಯದಿಂದ ೧.೪೫೭ ಟಿಎಂಸಿಯ ನೀರನ್ನು ಈ ನಗರಗಳ ಮತ್ತು 702 ಗ್ರಾಮೀಣ ಜನವಸತಿ ಪ್ರದೇಶಗಳ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು. 1547.22 ಕೋಟಿ ರೂಪಾಯಿ ವೆಚ್ಚದಲ್ಲಿ ವಿಜಯಪುರ ಜಿಲ್ಲೆಯ ಈ ಎಲ್ಲಾ ಗ್ರಾಮಗಳಿಗೆ ಮತ್ತು ನಗರ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ವಿಜಯಪುರ, ಬಸವನ ಬಾಗೇವಾಡಿ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ಗ್ರಾಮೀಣ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರೆ ೪ ನಗರ ಸ್ಥಳೀಯ ಸಂಸ್ಥೆಗಳಾದ ಚಡಚಣ, ಮನಗೂಳಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-1) ಒಳಗೊಂಡಂತೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಜಲ ಜೀವನ್ ಮಿಷನ್ ಯೋಜನೆಯಡಿ NIDA ಅಡಿಯಲ್ಲಿ NABARD ನಿಂದ ಪಡೆದ ಹಾಗೂ ಸಾಲದಡಿ ಹಾಗೂ UDD ಇಂದ ಅನುದಾನದ ನೆರವಿನೊಂದಿಗೆ ಸಂಯೋಜಿತಗೊಳಿಸಿದ ಪರಿಷ್ಕೃತ ಅಂದಾಜು ಮೊತ್ತ ರೂ. 2077.63 ಕೋಟಿಗಳಿಗೆ ಸಚಿವ ಸಂಪುಟದ ಅನುಮೋದನೆ ದೊರತಿದೆ ಎಂದು ಹೇಳಿದ್ದಾರೆ.