ಬೆಂಗಳೂರು: ಬಿಡಿಎ ವಸತಿ ಯೋಜನೆಯ ಗುತ್ತಿಗೆ ನೀಡುವ ಸಲುವಾಗಿ ಲಂಚ ಪ್ರಕರಣ ಆರೋಪದಲ್ಲಿ, ವಿಶೇಷ ನ್ಯಾಯಾಲಯದ ಆದೇಶದ ಮೇಲೆ ಬೆಂಗಳಊರು ನಗರ ಲೋಕಾಯುಕ್ತ ಠಾಣೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.
ನೆರೆ ಸಂತ್ರಸ್ತ ‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಬೆಳೆ ಪರಿಹಾರ’ಕ್ಕೆ 300 ಕೋಟಿ ರೂ ಬಿಡುಗಡೆ
ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರು ರಾಮಲಿಂಗಂ ಕನ್ಸ್ ಟ್ರಕ್ಷನ್ ಕಂಪನಿಗೆ ಬಿಡಿಎಯಿಂದ ವಸತಿ ಯೋಜನೆಗೆ ಸಂಬಂಧಿಸಿದಂತೆ ಅನುಮತಿ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿಶೇಷ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಲೋಕಾಯುಕ್ತ ಪೊಲೀಸರು ಬಿಎಸ್ ಯಡಿಯೂರಪ್ಪ, ಪುತ್ರ ಬಿ.ವೈ ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್, ಚಂದ್ರಕಾಂತ್, ರಾಮಲಿಂಗಂ, ಸಹಾಕರ ಸಚಿವ ಎಸ್ ಟಿ ಸೋಮಶೇಖರ್, ಜಿ ಸಿ ಪ್ರಕಾಶ್, ಕೆ ರವಿ, ವಿರೂಪಾಕ್ಷಪ್ಪ ಯಮಕನಮರಡಿ ವಿರುದ್ಧ ಪಿಸಿ ಆಕ್ಟ್ 7, 8, 9, 10, 13 ಮತ್ತು ಐಪಿಸಿ ಸೆಕ್ಷನ್ 383, 384, 415, 420, ಸೆಕ್ಷನ್ 34 ಹಾಗೂ 120ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರಾಜ್ಯದಲ್ಲಿ ವರ್ಷದಲ್ಲಿ 30 ಐಟಿಐಗಳ ಉನ್ನತೀಕರಣ – ಸಚಿವ ಅಶ್ವತ್ಥನಾರಾಯಣ
ಈ ಹಿನ್ನಲೆಯಲ್ಲಿ ಶೀಘ್ರವೇ ಪೊಲೀಸರಿಂದ ತನಿಖೆ ಶುರುವಾಗಲಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಅವರ ಪುತ್ರ ಬಿವೈ ವಿಜಯೇಂದ್ರ, ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ಹಲವರಿಗೆ ಸಂಕಷ್ಟ ಎದುರಾದಂತೆ ಆಗಲಿದೆ.