ಹೊನ್ನಾಳಿ: ದಾವಣಗೆರೆ: ಸಹೋದರ ಮಗ ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೊನ್ನಾಳಿಯ ಪೋಲಿಸ್ ಠಾಣೆಗೆ ತಮ್ಮ ಬೆಂಬಲಿಗರ ಜೊತೆಗೆ ಆಗಮಿಸಿದ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಅವರು ಪೋಲಿಸರ ಜೊತೆಗೆ ವಾಗ್ವಾದ ನಡೆಸಿರುವ ಘಟನೆ ನಡೆದಿದೆ.
ಪೋಲಿಸ್ ಠಾಣೆಗೆ ಆಗಮಿಸಿದ ರೇಣುಕಾಚಾರ್ಯ ಅವಘಡಕ್ಕೆ ಈಡಾದ ಕಾರನ್ನು ನಮಗೆ ತೋರಿಸುವಂತೆ ಪೋಲಿಸರ ಮುಂದೆ ಹಠ ಮಾಡಿದರು, ಈ ವೇಳೆಯಲ್ಲಿ, ಸಿಪಿಐ ಸಿದ್ದನಗೌಡರವರು ಪ್ರಕರಣ ತನಿಖೆ ಹಂತದಲ್ಲಿದ್ದರಿಂದ ಕಾರನ್ನು ತೋರಿಸಲು ಆಗುವುದಿಲ್ಲ ಎಂದು ಹೇಳಿದರು. ಇದೇ ವೇಳೆ ಪೋಲಿಸರ ಮಾತಿಗೆ ಗರಂ ಆದ ಶಾಸಕರು, ಯಾರ್ ಅದು ಅಲೋಕ್ ಕುಮಾರ್, ಯಾರ್ ತೀರ್ಮಾನ ಮಾಡಿದ್ರು?, ಅವರು ಕಾರು ಓವರ್ ಸ್ಪೀಡ್ ಇತ್ತು ಎಂದು ಹೆಂಗ್ ಹೇಳಿದ್ರು?. ಈ ಪ್ರಕಣದ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ರಾ?. ಪ್ರಾಥಮಿಕ ತನಿಖೆ ನನ್ನಿಂದ ಆರಂಭವಾಗ್ಬೇಕು ಅಂತ ಹೇಳಿದರು.