ಬೆಂಗಳೂರು : ಬೆಂಗಳೂರಲ್ಲಿ ಇಂದು ಮತ್ತೊಂದು ಭೀಕರವಾದಂತಹ ಕೊಲೆ ನಡೆದಿದ್ದು, ಆಶ್ರಯ ಕೊಟ್ಟಂತಹ ಸ್ನೇಹಿತನನ್ನೇ ಯುವಕನೊಬ್ಬ ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಿಮ್ಮಬೋವಿಪಾಳ್ಯದಲ್ಲಿ ಈ ಒಂದು ಕೊಲೆ ನಡೆದಿದೆ.
ಹೌದು ಸಿಗರೇಟ್ ನಿಂದ ಸುಟ್ಟು ದೊಣ್ಣೆಯಿಂದ ಹೊಡೆದು ಪ್ರದೀಪ್ (41) ಎನ್ನುವ ವ್ಯಕ್ತಿಯ ಹತ್ಯೆಯಾಗಿದೆ. ಆರೋಪಿ ಚೇತನ್ (26) ನನ್ನು ಸದ್ಯ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಚೇತನ್ ಪ್ರದೀಪ್ ನನ್ನು ಕೊಂದಿದ್ದಾನೆ.
ಸಿಗರೇಟ್ ನಿಂದ ಸುಟ್ಟು, ದೊಣ್ಣೆ ಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕಿರುಚಾಡುವ ಶಬ್ದ ಕೇಳಿಸದಂತೆ ಟಿವಿ ಸೌಂಡ್ ಜಾಸ್ತಿ ಇಟ್ಟು ಕೊಲೆ ಮಾಡಲಾಗಿದೆ. ಟಿವಿ ಸೌಂಡ್ ಜಾಸ್ತಿ ಆದ ಹಿನ್ನೆಲೆ, ಮನೆಯ ಮಾಲೀಕರು ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯ ಬಳಿಕ ತನ್ನ ಕಾರಿನಲ್ಲಿ ಚೇತನ್ ಪರಾರಿಯಾಗುತ್ತಿದ್ದ.ಟವರ್ ಲೊಕೇಶನ್ ಆಧಾರದ ಮೇಲೆ ಇದೀಗ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.