ಬೆಂಗಳೂರು : ಬಹಿರ್ದೆಸೆಗೆ ಎಂದು ತೆರಳಿದ್ದ ಬಾಲಕನ ಮೇಲೆ ದುಷ್ಕರ್ಮಿಗಳು ತಲೆ ಹಾಗೂ ಹೊಟ್ಟೆ ಭಾಗಕ್ಕೆ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನರಿಗಾ ಗ್ರಾಮದಲ್ಲಿ ನಡೆದಿದೆ.
ನರಿಗಾ ಗ್ರಾಮದಲ್ಲಿ ದೊಣ್ಣೆಯಿಂದ ಹೊಡೆದು ಬಾಲಕನ ಭೀಕರ ಹತ್ಯೆ ಮಾಡಲಾಗಿದೆ.ಮೃತ ಬಾಲಕನನ್ನು ಪ್ರಾಣೇಶ್ (15) ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನರಿಗ ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ.
ಮೇ 15ರಂದು ನಡೆದ ಈ ಒಂದು ಘಟನೆ ಇದೀಗ ತಡವಾಗಿ ಬಳಕೆಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಬಹಿರ್ದೆಸೆಗೆ ಎಂದು ಬಾಲಕ ಪ್ರಾಣೇಶ್ ತೆರಳಿದ್ದ. ಈ ವೇಳೆ ಆತನ ಮೇಲೆ ದುಷ್ಕರ್ಮಿಗಳು ದೊಣ್ಣೆಯಿಂದ ಹಲ್ಲಿ ಮಾಡಿದ್ದಾರೆ. ಇದೀಗ ಪ್ರಾಣೇಶ್ ಶವವಾಗಿ ಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಬಾಲಕ ಪ್ರಾಣೇಶನ ತಲೆಗೆ ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ.
ಶಾಲೆಗೆ ರಜೆ ಹಿನ್ನೆಲೆಗೆ ತಂದೆ ತಾಯಿ ಬಳಿಗೆ ಪ್ರಾಣೇಶ್ ಬಂದಿದ್ದ.ಮೂಲತಃ ಮಂತ್ರಾಲಯದ ಕೂಲಿಕಾರ್ಮಿಕ ದಂಪತಿಯ ಪುತ್ರ ಎಂದು ಹೇಳಲಾಗುತ್ತಿದೆ. ಮೂರು ತಿಂಗಳ ಹಿಂದೆ ಗಾರೆ ಕೆಲಸಕ್ಕೆ ಎಂದು ಗ್ರಾಮಕ್ಕೆ ಬಂದು ಕುಟುಂಬ ನೆಲೆಸಿತ್ತು.ತಂದೆ ತಾಯಿ ಜೊತೆಗೆ ಬಂದು ಬಾಲಕ ಪ್ರಾಣೇಶ್ ಇದೀಗ ಭೀಕರವಾಗಿ ಕೊಲೆಯಾಗಿದ್ದಾನೆ. ಘಟನೆ ಕುರಿತಂತೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.