ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಹಾಡು ಹಗಲೇ ಇಬ್ಬರು ಕತರ್ನಾಕ್ ಖದೀಮರು ಮಚ್ಚು ತೋರಿಸಿ ಯುವಕನನ್ನು ರಾಬರಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಕುಡುವತ್ತಿ-ಹುರಳಗುರ್ಕಿ ಬಳಿ ಈ ಒಂದು ಘಟನೆ ನಡೆದಿದೆ. ಯುವಕನ ರಾಬರಿ ಮಾಡುತ್ತಿರುವ ಘಟನೆಯನ್ನು ಸ್ಥಳಿಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಹೌದು ಹಾಡು ಹಗಲೇ ಮಚ್ಚು ತೋರಿಸಿ ಯುವಕನ ರಾಬರಿ ಮಾಡಿದ ಕಳ್ಳರು, ಮಚ್ಚು ತೋರಿಸಿ ರಾಬರಿ ಮಾಡಿದ ಕತರ್ನಾಕ್ ಕಳ್ಳರು. ಬೈಕ್ ನಲ್ಲಿ ಬಂದಂತಹ ಇಬ್ಬರು ದುಷ್ಕರ್ಮಿಗಳಿಂದ ಈ ಒಂದು ಕೃತ್ಯ ನಡೆದಿದೆ. ರಾಬ್ರಿ ಮಾಡುತ್ತಿರುವ ವಿಡಿಯೋ ಇವನು ಸ್ಥಳೀಯರು ಸೆರೆ ಹಿಡಿದಿದ್ದಾರೆ.
ಈ ಇಬ್ಬರು ಕಳ್ಳರು ರಾಬರಿ ಮಾಡಿ ಮುದ್ದೇನಹಳ್ಳಿ ಆಸ್ಪತ್ರೆಯ ಬಳಿ ಬಂದಿದ್ದರು. ನಂದಿನಿ ಪಾರ್ಲರ್ ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು. ಈ ವೇಳೆ ಮೊಬೈಲ್ ನಲ್ಲಿ ವಿಡಿಯೋ ನೋಡಿದ ಸ್ಥಳೀಯರು ಇವರೇ ಆ ರಾಬರಿ ಮಾಡಿದ ಕಳ್ಳರು ಎಂದು ಅವರನ್ನು ಹಿಡಿಯಲು ಯತ್ನಿಸಿದಾಗ, ಅವರನ್ನು ಕೂಡ ಹೆದರಿಸಿ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದೀಗ ದೂರು ದಾಖಲಿಸಿಕೊಂಡಿದ್ದು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.