ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಗೌರವದ ದುರಂತ ಸಂಭವಿಸಿದ್ದು ಕಾರ್ಮಿಕರ ಕ್ವಾರ್ಟರ್ಸ್ ತೆರವು ಕಾರ್ಯಾಚರಣೆಯ ವೇಳೆ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಹಟ್ಟಿ ಚಿನ್ನದ ಗಣಿ ಕಂಪನಿಯ ಕ್ವಾಟರ್ಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ವಾಟರ್ಸ್ ನಲ್ಲಿ ಕಾರ್ಮಿಕರ ಕ್ವಾರ್ಟರ್ಸ್ ತೆರವು ಕಾರ್ಯಾಚರಣೆ ವೇಳೆ ಈ ಒಂದು ಘಟನೆ ನಡೆದಿದ್ದು, ವಿದ್ಯುತ್ ಸಂಪರ್ಕ್ ಕಡಿತಗೊಳಿಸಿದೆ ತೆರವುಗೊಳಿಸಲಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ವಿದ್ಯುತ್ ಪ್ರವಹಿಸಿ 30 ವರ್ಷದ ಯುವಕ ದುರ್ಮರಣ ಹೊಂದಿದ್ದಾನೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಈ ಒಂದು ದುರಂತ ಸಂಭವಿಸಿದೆ ಎಂದು ಆರೋಪ ಕೇಳಿ ಬಂದಿದೆ. ಘಟನೆ ಕುರಿತಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.