ಕಲಬುರ್ಗಿ : ಬೆಳಗಾಗಿ ವಿವಿಧಡೆ ಸಾಲ ಮಾಡಿಕೊಂಡಿದ್ದ ಯುವ ರೈತನೊಬ್ಬ ಸಾಲಭಾದೇಯನ್ನು ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಹುಳಿಗೇರ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ರೈತನನ್ನು ಹುಳಿಗೇರಾ ಗ್ರಾಮದ ನಿವಾಸಿ ಪ್ರಕಾಶ ರವೀಂದ್ರ ಜಮದಾರ್ (24) ಎಂದು ತಿಳಿದುಬಂದಿದೆ.ಪ್ರಕಾಶ ರಟಕಲ್ ಬ್ಯಾಂಕಿನಿಂದ ಕೃಷಿ ಚಟುವಟಿಕೆಗಾಗಿ 80 ಸಾವಿರ ರೂ. ಮತ್ತು ಖಾಸಗಿಯಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇನ್ನೂ ಕೈಕೊಟ್ಟ ಬೆಳೆ, ಸಾಲ ತೀರಿಸಲು ಆಗದೇ ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ನಿನ್ನೆ ರಾತ್ರಿ ಮನೆಯವರೆಲ್ಲ ಯಾಕೆ ಇನ್ನೂ ಪ್ರಕಾಶ್ ಮನೆಗೆ ಬಂದಿಲ್ಲ ಎಂದು ಹುಡುಕಾಡುತ್ತಿದ್ದ ವೇಳೆ, ಪ್ರಕಾಶ್ ಹಿಪ್ಪರಗಿ ಗ್ರಾಮದ ಮಾರ್ಗದಲ್ಲಿರುವ ತನ್ನ ಕೃಷಿ ಜಮೀನಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.