Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯದ ಗೆಜ್ಜಲಗೆರೆಯಿಂದ ವಿಧಾನಸೌಧದವರೆಗೆ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ HDK ವಾರ್ನಿಂಗ್
KARNATAKA

ಮಂಡ್ಯದ ಗೆಜ್ಜಲಗೆರೆಯಿಂದ ವಿಧಾನಸೌಧದವರೆಗೆ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ HDK ವಾರ್ನಿಂಗ್

By ವಸಂತ ಬಿ ಈಶ್ವರಗೆರೆ

ಮಂಡ್ಯ : ಮದ್ದೂರು ನಗರಸಭೆಯಿಂದ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಗೆಜ್ಜಲಗೆರೆಯಿಂದ ವಿಧಾನಸೌಧದವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ನಗರಸಭೆಗೆ ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ 69 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ನಗರಸಭೆಗೆ ಸೇರ್ಪಡೆಗೊಂಡಿರುವ ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಪಂಚಾಯಿತಿಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿದ್ದು, ಅವುಗಳನ್ನು ಗ್ರಾಮ ಪಂಚಾಯಿತಿಯನ್ನಾಗಿ ಉಳಿಸಬೇಕು. ಇಲ್ಲದಿದ್ದರೆ ಗೆಜ್ಜಲಗೆರೆಯಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ 50 ಸಾವಿರಕ್ಕೂ ಹೆಚ್ಚಿನ ಜನರು ಪಾದಯಾತ್ರೆಯ ಮೂಲಕ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.

ಹಲವು ವರ್ಷಗಳ ಹಿಂದೆ ಗೆಜ್ಜಲಗೆರೆ ಗ್ರಾಮದಲ್ಲಿ ರೈತಪರವಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಗೋಲಿಬಾರ್ ನಡೆದಾಗ ಇಬ್ಬರು ರೈತರು ವೀರ ಮರಣ ಹೊಂದಿದ್ದಾರೆ. ಇಂತಹ ಹೋರಾಟದ ಇತಿಹಾಸ ಹೊಂದಿರುವ ಗ್ರಾಮದ ಜನರ ಭಾವನೆಗಳಿಗೆ ವಿರುದ್ಧವಾಗಿ ಸರ್ಕಾರವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ನಡೆದುಕೊಳ್ಳಬಾರದು ಎಂದು ತಿಳಿಸಿದರು. ಇನ್ನು ಕಾಲ ಮಿಂಚಿಲ್ಲ ಸ್ಥಳೀಯ ಶಾಸಕರು ನಗರಸಭೆಯಿಂದ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಕೈ ಬಿಟ್ಟು ಜನರ ಪರವಾಗಿ ಕೆಲಸ ಮಾಡಬೇಕು. ಅಧಿಕಾರ ಹಾಗೂ ಹಣದ ಮದದಿಂದ ನಡೆದುಕೊಂಡರೆ ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆಯಿಂದ ಗ್ರಾಮ ಪಂಚಾಯಿತಿಗಳನ್ನು ಕೈ ಬಿಡುವಂತೆ ಮುಖ್ಯಮಂತ್ರಿಗಳಿಗೆ ನಗರಾಭಿವೃದ್ಧಿ ಸಚಿವರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ನಾನು ಕೂಡ ನಿಮ್ಮೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತೇನೆ. ಗ್ರಾಮಸ್ಥರು ಮಾಡುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಘೋಷಣೆ ಮಾಡಿದರು. ಸರ್ಕಾರ ಹಾಗೂ ಸ್ಥಳೀಯ ಶಾಸಕರು ಜನಾಭಿಪ್ರಾಯಕ್ಕೆ ತಲೆ ಭಾಗಬೇಕು. ಗ್ರಾಮಸ್ಥರು ಮತ್ತು ರೈತ ಚಳವಳಿಗೆ ಗೌರವ ನೀಡಬೇಕು. ಹಣದಿಂದ ಜನರನ್ನು ಕೊಂಡುಕೊಳ್ಳಬಹುದು ಅಂತ ತಿಳಿದುಕೊಂಡರೆ ಧೂಳಿಪಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ನಾಯಕಿ ಸುನಂದಾ ಜಯರಾಮ್ ಮಾತನಾಡಿ, 4 ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸುವ ವಿಷಯದಲ್ಲಿ ಸ್ಥಳಿಯ ಶಾಸಕರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸಿರುವುದರಿಂದ ಗ್ರಾಮಸ್ಥರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿಯಾಗಿದೆ. ಆದ್ದರಿಂದ ನಗರಸಭೆಗೆ ಸೇರ್ಪಡೆ ಮಾಡಿಕೊಂಡಿರುವ ಗ್ರಾಪಂಗಳನ್ನು ಕೈ ಬಿಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ನಗರಸಭೆ ವಿರೋಧಿಸಿ 69 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದು, ನಗರಸಭೆಯಿಂದ ಗ್ರಾಪಂಗಳನ್ನು ಕೈ ಬಿಡದಿದ್ದರೆ ಇನ್ನೂ 2 ವರ್ಷಗಳು ಕಳೆದರೂ ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ರೈತರ ಹಾಗೂ ಜನರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ತಾಲೂಕಿನ ಕೊನೆಯ ಭಾಗಕ್ಕೆ ನೀರು ಹೋಗುತ್ತಿಲ್ಲ. ರೈತರು ಸಂಕಷ್ಟದ ಪರಿಸ್ಥಿತಿ ಸಿಲುಕಿದ್ದಾರೆ. ಕಾವೇರಿ ನದಿಯಿಂದ ಏಕೆ ಕುಡಿಯುವ ನೀರು ತೆಗೆದುಕೊಂಡು ಹೋಗಬೇಕು. ಜಿಲ್ಲೆಯ ಜನರು ಸರ್ಕಾರಕ್ಕೆ ಏನು ಅನ್ಯಾಯ ಮಾಡಿದ್ದಾರೆ. ಆಧುನಿಕರಣದ ಹೆಸರಲ್ಲಿ ರೈತರ ಜತೆ ಸರ್ಕಾರ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ರೈತರಿಗಾಗಿ ಎಚ್.ಡಿ.ಕುಮಾರಸ್ವಾಮಿ ಸಾಲ ಮನ್ನ ಮಾಡಿದ್ದರು. ಕುಮಾರಣ್ಣಗೆ ಒಂದು ಬಾರಿ ಅವಕಾಶ ಕೊಡಿ. ರೈತರಿಗೆ, ನಮ್ಮ ರಾಜ್ಯಕ್ಕೆ ಒಳ್ಳೆಯದಾಗುತ್ತೆ. ನಗರಸಭೆಯಿಂದ ಗ್ರಾಪಂಗಳನ್ನು ಕೈ ಬಿಡುವ ಸಂಬಂಧ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಇದೇ ವೇಳೆ ಗೊರವನಹಳ್ಳಿ ಗ್ರಾಮಸ್ಥರು ಕೂಡ ನಗರಸಭೆಯಿಂದ ಗೊರವನಹಳ್ಳಿ ಗ್ರಾಪಂ ಅನ್ನು ಕೈ ಬಿಡುವಂತೆ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಗೆಜ್ಜಲಗೆರೆಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ರೈತ ನಾಯಕಿ ಸುನಂದ ಜಯರಾಮು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಮುಖಂಡರಾದ ಚಂದ್ರಶೇಖರ್, ಜಿ.ಟಿ.ಪುಟ್ಟಸ್ವಾಮಿ, ಡಿ.ಎಸ್.ಶೇಖರ್, ಮೋಹನ್, ವೀರೇಶ್, ಪ್ರಕಾಶ್, ಗೊರವನಹಳ್ಳಿ ಪ್ರಸನ್ನ, ಮಹೇಶ್, ಉಮೇಶ್, ರಾಜಣ್ಣ, ಬಿಳಿಯಪ್ಪ, ಸೇರಿದಂತೆ ಇತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Watch Video: ಇರಾನ್ ಮೇಲೆ ನಡೆಸಿದ ದಾಳಿಯ ಮೊದಲ ಅಧಿಕೃತ ವೀಡಿಯೊವನ್ನು ಇಸ್ರೇಲ್ ಬಿಡುಗಡೆ | US, Israel strike Iran

Share. Facebook Twitter LinkedIn WhatsApp Email

Related Posts

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

2 Mins Read

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

2 Mins Read

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

2 Mins Read
Recent News

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಮಾರಿಕಾಂಬೆ ಸನ್ನಿಧಿಗೆ ಮಂಗಳೂರು ಡಿಆರ್ ರಮೇಶ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ: ಪ್ರತಿಷ್ಠಾನದಿಂದ ಸನ್ಮಾನ

State News
KARNATAKA

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಕೇಂದ್ರ ಸರ್ಕಾರದ ಸಾಲು ಸಾಲು ಅಭಿವೃದ್ಧಿ ಕೆಲಸಗಳು ಜನರನ್ನು ತಲುಪಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಹನ್ನೆರಡು ವರ್ಷಗಳ…

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಮಾರಿಕಾಂಬೆ ಸನ್ನಿಧಿಗೆ ಮಂಗಳೂರು ಡಿಆರ್ ರಮೇಶ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ: ಪ್ರತಿಷ್ಠಾನದಿಂದ ಸನ್ಮಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.