ಬೆಂಗಳೂರು : ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ ನಾಗೇಂದ್ರ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದೀಗ ಬಿ ನಾಗೇಂದ್ರ ಅವರೇ ನಕಲಿ ಅಕೌಂಟ್ ತೆರೆಯಲು ಸೂಚನೆ ನೀಡಿದರು ಎಂಬ ಸ್ಫೋಟಕ ವಾದಂತಹ ಮಾಹಿತಿ ಬಯಲಾಗಿದೆ.
ಹೌದು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ನಿನ್ನೆ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದರು ಈ ವೇಳೆ ಮಾಜಿ ಸಚಿವ ಭೀ ನಾಗೇಂದ್ರ ಅವರೇ ಒಂದು ಹಗರಣಕ್ಕೆ ಮಾಸ್ಟರ್ ಮೈಂಡ್ ಎಂದು ಉಲ್ಲೇಖವಾಗಿದ್ದು ಇದೀಗ ಮತ್ತೊಂದು ಸ್ಫೋಟಕವಾದ ಮಾಹಿತಿ ಬಹಿರಂಗವಾಗಿದೆ.
ಇಡಿ ಅಧಿಕಾರಿಗಳು ಪ್ರಕರಣದ ಸಂಪೂರ್ಣ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ಬಿ.ನಾಗೇಂದ್ರ ಅವರೇ ಅಧಿಕಾರಿಗಳಿಗೆ ನಕಲಿ ಖಾತೆಗಳನ್ನು ಸೃಷ್ಟಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನುವುದನ್ನು ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಬಿ ನಾಗೇಂದ್ರ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
ಚಾರ್ಜ್ಶೀಟ್ನಲ್ಲಿ ಏನೇನು ಇದೆ?
ಈ ಹಿಂದೆ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಒಟ್ಟು ಮೂರು ಸಾವಿರದ ಪುಟಗಳ ಚಾರ್ಜ್ಶೀಟ್ನಲ್ಲಿ ಹಣ, ಚಿನ್ನ, ಕಾರು ಸೇರಿ 50 ಕೋಟಿ ರೂಪಾಯಿ ಜಪ್ತಿ ಮಾಡಿರುವುದಾಗಿ ಎಸ್‌ಐಟಿ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
ನಗದು- 16.83 ಕೋಟಿ ರೂಪಾಯಿ ಹಣ, 11 ಕೋಟಿ 70 ಲಕ್ಷ ಮೌಲ್ಯದ 16.252 ಕೆ.ಜಿ ಚಿನ್ನ, 4.51 ಕೋಟಿ ಮೌಲ್ಯದ ಲ್ಯಾಂಬರ್ಗಿನಿ ಉರುಸ್ ಹಾಗೈ, ಮರ್ಸಿಡೀಸ್ ಬೆಂಜ್ ಕಾರು, ತನಿಖಾಧಿಕಾರಿ ಬ್ಯಾಂಕ್ ಖಾತೆಯಿಂದ 3.19 ಕೋಟಿ ರೂ. ಹಣ, 13.72 ಕೋಟಿ ರೂ. ಹಣ ಫ್ರೀಜ್ ಸೇರಿದಂತೆ ಒಟ್ಟು ಒಟ್ಟು 49.96 ಕೋಟಿ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.