Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಫೋಟೋ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ!

BIG NEWS : ‘GBA’ ಚುನಾವಣೆ: ಮೈತ್ರಿ ಇಲ್ಲದಿದ್ದರೆ ಒಂಟಿ ಸ್ಪರ್ಧೆಗೆ ಜೆಡಿಎಸ್ ಮಾಸ್ಟರ್ ಪ್ಲಾನ್!

Shocking: ಪ್ರಧಾನಿ ಮೋದಿಯನ್ನು ‘ಹಾವಾಡಿಗ’ ಎಂದು ಬಿಂಬಿಸಿದ ಕಾರ್ಟೂನ್ ಪ್ರಕಟಣೆ: ನಾರ್ವೆ ಪತ್ರಿಕೆಯ ವಿರುದ್ಧ ಜಾಗತಿಕ ಆಕ್ರೋಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮೂರನೇ ದಿನಕ್ಕೆ ಕಾಲಿಟ್ಟ ಅಮೆರಿಕಾ-ಇಸ್ರೇಲ್ Vs ಇರಾನ್ ಸಂಘರ್ಷ : ಇರಾನ್ ನಿಂದ ಫ್ರಾನ್ಸ್ ನೌಕನೆಲೆ ಸೇರಿ ದುಬೈ, ದೋಹಾದಲ್ಲಿ ಭೀಕರ ದಾಳಿ !
WORLD

BREAKING : ಮೂರನೇ ದಿನಕ್ಕೆ ಕಾಲಿಟ್ಟ ಅಮೆರಿಕಾ-ಇಸ್ರೇಲ್ Vs ಇರಾನ್ ಸಂಘರ್ಷ : ಇರಾನ್ ನಿಂದ ಫ್ರಾನ್ಸ್ ನೌಕನೆಲೆ ಸೇರಿ ದುಬೈ, ದೋಹಾದಲ್ಲಿ ಭೀಕರ ದಾಳಿ !

By kannadanewsnow57

ದುಬೈ/ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮತ್ತು ಪ್ರಮುಖ ಸೇನಾಧಿಕಾರಿಗಳನ್ನು ಅಮೆರಿಕಾ ಹಾಗೂ ಇಸ್ರೇಲ್ ಜಂಟಿ ದಾಳಿಯಲ್ಲಿ ಹತ್ಯೆಗೈದ ಬೆನ್ನಲ್ಲೇ, ಇರಾನ್ ಈಗ ಪ್ರಬಲ ಪ್ರತಿಕಾರಕ್ಕೆ ಮುಂದಾಗಿದೆ. ಇಂದು ಮೂರನೇ ದಿನವೂ ಸಂಘರ್ಷ ಮುಂದುವರಿದಿದ್ದು, ಇಡೀ ವಿಶ್ವವೇ ಆತಂಕದಿಂದ ಇತ್ತ ನೋಡುವಂತಾಗಿದೆ.

ಇಂದಿನ ಪ್ರಮುಖ ಬೆಳವಣಿಗೆಗಳು:

ರಾಜಧಾನಿಗಳಲ್ಲಿ ಆತಂಕ: ಇರಾನ್ ತನ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ವಿಸ್ತರಿಸಿದ್ದು, ಇಂದು ಸತತ ಎರಡನೇ ದಿನವೂ ದುಬೈ ಮತ್ತು ದೋಹಾ ಬಳಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಅರಬ್ ರಾಷ್ಟ್ರಗಳ ಮೇಲಿನ ಇರಾನ್‌ನ ಈ ದಾಳಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ಅಮೆರಿಕಾ ಸೈನಿಕರ ಸಾವು: ಇರಾನ್ ನಡೆಸಿದ ವಾಯುದಾಳಿಯಲ್ಲಿ ಅಮೆರಿಕಾದ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಅಧಿಕೃತವಾಗಿ ಖಚಿತಪಡಿಸಿದೆ. ಇದು ಯುದ್ಧ ಆರಂಭವಾದ ನಂತರ ಅಮೆರಿಕಾ ಅನುಭವಿಸುತ್ತಿರುವ ಮೊದಲ ದೊಡ್ಡ ಜೀವಹಾನಿಯಾಗಿದೆ.

ಟ್ರಂಪ್ ಎಚ್ಚರಿಕೆ: ಇರಾನ್‌ನ ಈ ನಡೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣವಾಗಿ ಖಂಡಿಸಿದ್ದಾರೆ. “ಅಮೆರಿಕಾ ಅಥವಾ ಇಸ್ರೇಲ್ ಹಿತಾಸಕ್ತಿಗಳ ಮೇಲೆ ದಾಳಿ ಮುಂದುವರಿಸಿದರೆ, ಇರಾನ್ ಹಿಂದೆಂದೂ ಕಂಡಿರದ ಮಟ್ಟದ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ಅಬ್ಬರ: ಇತ್ತ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್ ಮೇಲಿನ ತಮ್ಮ ದಾಳಿಯನ್ನು ತೀವ್ರಗೊಳಿಸಿವೆ. ಇಂದು ಇರಾನ್‌ನ ಹಲವು ಆಯಕಟ್ಟಿನ ಪ್ರದೇಶಗಳ ಮೇಲೆ ಮತ್ತೊಂದು ಸುತ್ತಿನ ವಾಯುದಾಳಿ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

BREAKING: US-Israel Vs Iran conflict enters third day: Iran joins French naval base Doha! launches deadly attacks in Dubai
Share. Facebook Twitter LinkedIn WhatsApp Email

Related Posts

BREAKING: ಥೈಲ್ಯಾಂಡ್‌ನಲ್ಲಿ ರೈಲು-ಬಸ್ ಮುಖಾಮುಖಿ ಡಿಕ್ಕಿಯಾಗಿ ಭೀಕರ ದುರಂತ: 8 ಮಂದಿ ಸಾವು, 35ಕ್ಕೂ ಹೆಚ್ಚು ಜನರಿಗೆ ಗಾಯ!

2 Mins Read

PM Modi: ನೆದರ್‌ಲ್ಯಾಂಡ್ಸ್‌ನಲ್ಲಿ ಭಾರತದ ಭವಿಷ್ಯದ 4 ಮಹತ್ವಾಕಾಂಕ್ಷೆಗಳನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ

2 Mins Read
After Trump’s Trip, Vladimir Putin To Meet Xi Jinping In China On May 19-20

ಟ್ರಂಪ್ ಪ್ರವಾಸದ ಬೆನ್ನಲ್ಲೇ ಮೇ 19-20ರಂದು ಚೀನಾಗೆ ವ್ಲಾಡಿಮಿರ್ ಪುಟಿನ್ ಭೇಟಿ

4 Mins Read
Recent News

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಫೋಟೋ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ!

BIG NEWS : ‘GBA’ ಚುನಾವಣೆ: ಮೈತ್ರಿ ಇಲ್ಲದಿದ್ದರೆ ಒಂಟಿ ಸ್ಪರ್ಧೆಗೆ ಜೆಡಿಎಸ್ ಮಾಸ್ಟರ್ ಪ್ಲಾನ್!

Shocking: ಪ್ರಧಾನಿ ಮೋದಿಯನ್ನು ‘ಹಾವಾಡಿಗ’ ಎಂದು ಬಿಂಬಿಸಿದ ಕಾರ್ಟೂನ್ ಪ್ರಕಟಣೆ: ನಾರ್ವೆ ಪತ್ರಿಕೆಯ ವಿರುದ್ಧ ಜಾಗತಿಕ ಆಕ್ರೋಶ

Twisha Sharma Case: ಟ್ವಿಶಾ ಶರ್ಮಾ ಸಾವು ಕೊಲೆಯಲ್ಲ, ಆತ್ಮಹತ್ಯೆ! ಡ್ರಗ್ಸ್ ಸೇವನೆ ಆರೋಪಕ್ಕೂ ಸಿಗಲಿಲ್ಲ ಸಾಕ್ಷಿ; ಭೋಪಾಲ್ ಪೊಲೀಸರ ಬಿಗ್ ಅಪ್ಡೇಟ್!

State News
KARNATAKA

BREAKING : ಬೆಂಗಳೂರಲ್ಲಿ ಮತ್ತೊಂದು ದರೋಡೆ : ಫೋಟೋ ನೆಪದಲ್ಲಿ 3 ಕೋಟಿ ಚಿನ್ನಾಭರಣ ದೋಚಿ ಪರಾರಿ!

By ಸುರೇಶ್‌ KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖದೀಮರ ಕೈಚಳಕ ಮುಂದುವರಿದಿದ್ದು, ಹೋಲ್‌ಸೇಲ್ ಆಗಿ ಚಿನ್ನ ಖರೀದಿಸುವ ನೆಪದಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ…

BIG NEWS : ‘GBA’ ಚುನಾವಣೆ: ಮೈತ್ರಿ ಇಲ್ಲದಿದ್ದರೆ ಒಂಟಿ ಸ್ಪರ್ಧೆಗೆ ಜೆಡಿಎಸ್ ಮಾಸ್ಟರ್ ಪ್ಲಾನ್!

Rain Alert : ಬೆಂಗಳೂರು ಸೇರಿ ಹಲವೆಡೆ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

SHOCKING : ಕೋಲಾರದಲ್ಲಿ ಘೋರ ದುರಂತ : ತಿಥಿ ಕಾರ್ಯಕ್ರಮದಲ್ಲಿ ಊಟ ಮಾಡುವಾಗ, ಕರೆಂಟ್ ಶಾಕ್ ನಿಂದ ಬಾಲಕ ಸಾವು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.