ಕಾಬೂಲ್: ಕಾಬೂಲ್ ಶಿಕ್ಷಣ ಕೇಂದ್ರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಸ್ಥಳೀಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದು, “ನಾವು ಇಲ್ಲಿಯವರೆಗೆ ನಮ್ಮ ವಿದ್ಯಾರ್ಥಿಗಳ 100 ಮೃತ ದೇಹಗಳನ್ನು ಎಣಿಸಿದ್ದೇವೆ. ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಕ್ಲಾಸ್ ರೂಮ್ ತುಂಬಿತ್ತು ಅಂತ ಹೇಳಿದ್ದಾರೆ.
“ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಈ ಶೈಕ್ಷಣಿಕ ಕೇಂದ್ರದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದಾನೆ. ದುರದೃಷ್ಟವಶಾತ್, 19 ಜನರು ಹುತಾತ್ಮರಾಗಿದ್ದಾರೆ ಮತ್ತು ಇತರ 27 ಜನರು ಗಾಯಗೊಂಡಿದ್ದಾರೆ” ಎಂದು ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿಯ ಶಿಯಾ ಪ್ರದೇಶದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಜನರು ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸ್ ಮುಖ್ಯಸ್ಥರ ತಾಲಿಬಾನ್ ನಿಯೋಜಿತ ವಕ್ತಾರರು ತಿಳಿಸಿದ್ದಾರೆ. ‘ಕಾಜ್’ ಎಂಬ ಶೈಕ್ಷಣಿಕ ಕೇಂದ್ರದ ಮೇಲೆ ದಾಳಿ ನಡೆಸಲಾಗಿದ್ದು, ದುರದೃಷ್ಟವಶಾತ್ ಇದು ಸಾವು-ನೋವುಗಳಿಗೆ ಕಾರಣವಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಕೋರ್ ಟ್ವೀಟ್ ಮಾಡಿದ್ದಾರೆ.
Each number on those chairs represented one human being. Each number, and their families, had dreams to come here and take the university preparation entrance examination. Those dreams are dashed with fatal consequences for them, the families, communities , and the country. pic.twitter.com/CnphF6tgd9
— BILAL SARWARY (@bsarwary) September 30, 2022