ಹಾಸನ : ರಾಜ್ಯದಲ್ಲಿ ಹಸುವಿನ ಮೇಲೆ ಕ್ರೌರ್ಯ ನಿಲ್ಲುವಂತೆ ಕಾಣುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ಇದೀಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು ಕದ್ದೊಯ್ದು ಕತ್ತರಿಸಿ ಮಾಂಸ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಆಲೂರು ತಾಲೂಕಿನ ಹೆದ್ದುರ್ಗೆ ಗ್ರಾಮದ ಹೂವಣ್ಣ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ನಂತರ ಮಾಲೀಕರು ಕರುವನ್ನು ಹುಡುಕಿದಾಗ ಕರುವಿನ ರುಂಡ, ದೇಹದ ಅವಶೇಷಗಳು ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ.
ಘಟನೆ ಸಂಬಂಧ ಪೊಲೀಸರು ಮೋಹನ್, ಅಜಿತ್, ಅಜ್ಗರ್, ಕೌಶಿಕ್, ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳು ಕರುವಿನ ದೇಹದ ಭಾಗವನ್ನು ನದಿಗೆ ಎಸೆಯುತ್ತಿರುವುದನ್ನು ಸ್ಥಳೀಯರು ನೋಡಿದ್ದರು ಎನ್ನಲಾಗಿದೆ .
ಜ. 14ರ ಮಧ್ಯರಾತ್ರಿ ಕೊಟ್ಟಿಗೆಯಿಂದ ಕರುವನ್ನು ಕದ್ದೊಯ್ದು ದುಷ್ಕರ್ಮಿಗಳು ಅದನ್ನು ಕತ್ತರಿಸಿ ಅಲ್ಲಿಯೇ ಮಾಂಸ ಬೇಯಿಸಿ ಊಟ ಮಾಡಿದ್ದಾರೆ. ರೈತ ಹೂವಣ್ಣ ಹೇಳಿಕೆ ಆಧರಿಸಿ ಪ್ರಕಟಣ ದಾಖಲಿಸಿಕೊಂಡಿದ್ದ ಆಲೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.