ಮೈಸೂರು : ಮೈಸೂರಿನ ಉದಯನಗರ ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆ ನಡೆದ ಮೂರು ದಿನಗಳ ನಂತರ ಇಂದು ಮೈಸೂರು ಜಿಲ್ಲೆಗೆ ಗ್ರಹ ಸಚಿವಾ ಜಿ ಪರಮೇಶ್ವರ್ ಭೇಟಿ ನೀಡಿದರು ಈ ವೇಳೆ ಘಟನೆ ಕುರಿತಂತೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಘಟನೆಯಲ್ಲಿ ಯಾರೇ ತಪ್ಪಿಸಸ್ಥರಿದ್ದರೂ ಪಕ್ಷ ಹಾಗೂ ಧರ್ಮಭೇದವಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ಪೊಲೀಸರು ಯಾರದೇ ಹೇಳಿಕೆಯಿಂದ ಕುಗ್ಗುವುದಿಲ್ಲ. ಅದಕ್ಕಾಗಿ ಪೊಲೀಸರು ತರಬೇತಿ ಪಡೆದಿರುತ್ತಾರೆ. ಏನೇನೋ ಮಾತನಾಡುವವರನ್ನು ತಡೆಯಲು ಆಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಇನ್ನು ಠಾಣೆಯಲ್ಲಿ ಆರೋಪಿ ಇರಿಸಿದಕ್ಕೆ ರಾಜಣ್ಣ ಕಿಡಿ ಕಾರಿರುವ ವಿಚಾರವಾಗಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಇಲಾಖೆಗೆ ಕಾನೂನು ಅಷ್ಟೇ ಮುಖ್ಯವಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಪಕ್ಷ ವ್ಯಕ್ತಿ ಪೊಲೀಸರಿಗೆ ಮುಖ್ಯವಲ್ಲ ಎಂದು ಮೈಸೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.