ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮೆಟಲ್‌ ಗ್ಯಾಸ್ ಸ್ಪೋಟವಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ ಪೇಟೆಯಲ್ಲಿರು ಎಸ್‌.ಕೆ.ಸ್ಟೀಲ್‌ ಕಂಪನಿಯಲ್ಲಿ ಮೆಟಲ್‌ ಸ್ಟೋಟವಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಕಾರ್ಮಿಕರನ್ನು ಬಿಹಾರ ಮೂಲದ ಅಶೋಕ್‌ ಕುಮಾರ್‌ (49) ಹಾಗೂ ಒಡಿಶಾ ಮೂಲದ ಮುಖೇಶ್‌ ಕುಮಾರ್‌ (33) ಎಂದು ಗುರುತಿಸಲಾಗಿದೆ.

ಸುಶೀಲ್‌ ಕುಮಾರ್‌ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾಬಸ್‌ ಪೇಟೆ ಪೊಲೀಸ್‌ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Exit mobile version